ಹಾಸನ: ರಸ್ತೆ ಅಪಘಾತದಲ್ಲಿ (Road Accident) ಗಂಭೀರವಾಗಿ ಗಾಯಗೊಂಡಿದ್ದ ಹಾಸನ (Hassan) ಜಿಲ್ಲೆಯ ಯೋಧ (Soldier) ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಹೆಚ್.ಬಿ ಚನ್ನಬಸಪ್ಪ (54) ಮೃತ ಯೋಧ.ಚನ್ನಬಸಪ್ಪ ಹಾಸನ ಜಿಲ್ಲೆ, ಆಲೂರು ತಾಲೂಕಿನ ಚಿಕ್ಕಕಣಗಾಲು-ಹೊಸಳ್ಳಿ ಗ್ರಾಮದವರು. ನವೆಂಬರ್ 19 ರಂದು ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದಾಗ ಬೆಂಗಳೂರಿನ ಹುಣಸಮಾರನಹಳ್ಳಿಯಲ್ಲಿ ನಡೆದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚನ್ನಬಸಪ್ಪ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ:ಗುಜರಾತ್‍ನಲ್ಲಿ ಇಂದು ಮೊದಲ ಹಂತದ ಮತದಾನ – ತವರು ರಾಜ್ಯದಲ್ಲಿ ಮೋದಿ, ಶಾ ಜೋಡಿಗೆ ಅಗ್ನಿ ಪರೀಕ್ಷೆ1968 ರಲ್ಲಿ ಭಾರತೀಯ ಸೇನೆಗೆ ಸೇರಿದ್ದ ಚನ್ನಬಸಪ್ಪ ಭಾರತೀಯ ಸೇನೆ, ಭೂಸೇನೆ, ವಾಯುಸೇನೆ, ಜಲಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಇತ್ತೀಚೆಗೆ ಚನ್ನಬಸಪ್ಪ ಬೆಂಗಳೂರಿನ ಯಲಹಂಕದಲ್ಲಿರುವ ಏರ್‌ಫೋರ್ಸ್ನಲ್ಲಿ ಡಿಎಸ್‌ಸಿ ಯೂನಿಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಂದು ತಮ್ಮ ಹುಟ್ಟೂರಿನಲ್ಲಿ ಮೃತ ಯೋಧನ ಅಂತ್ಯಕ್ರಿಯೆ ನೆರವೇರಲಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಡ್ರಗ್ಸ್‌ ಸೇವನೆ ಆರೋಪ – NCB ಅಧಿಕಾರಿಗಳಿಂದ 3 ಯುವತಿಯರು ವಶಕ್ಕೆ
Sign in to your account
Username or Email Address


Password

 Remember Me


