ಮೈಸೂರು: ರಂಗಾಯಣದ (Rangayana) ನಿರ್ದೇಶಕ ಅಡ್ಡಂಡ ಕಾರ್ಯಪ್ಪ (Addanda Cariappa) ಅವರಿಗೆ ಜೀವ ಬೆದರಿಕೆ (Life Threat) ಒಡ್ಡಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಅಡ್ಡಂಡ ಕಾರ್ಯಪ್ಪ ಪೊಲೀಸ್ ಠಾಣೆಗೆ ಲಿಖಿತ ದೂರನ್ನು ನೀಡಿದ್ದಾರೆ.ಅಡ್ಡಂಡ ಸಿ ಕಾರ್ಯಪ್ಪ ಅವರು ‘ಟಿಪ್ಪು ನಿಜಕನಸು’ ನಾಟಕ ಕೃತಿಯನ್ನು ರಚಿಸಿದ್ದರು. ಇದರ ನಾಟವನ್ನೂ ಅವರು ನಿರ್ದೇಶಿಸಿದ್ದಾರೆ. ಇದೀಗ ಕಾರ್ಯಪ್ಪ ಅವರಿಗೆ ಶಿವಮೊಗ್ಗ ಬ್ರಾಹ್ಮಣ ಬೀದಿಯ ವಿಳಾಸದಿಂದ ಬೆದರಿಕೆ ಪತ್ರ ಬಂದಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.ನೀವೀಗ ಕೊಲೆಯಾಗುವ ಹಂತ ತಲುಪಿದ್ದೀರಿ. ನೀವು ನಂಬಿರುವ ದೇವರು ಕೂಡಾ ನಿಮ್ಮನ್ನು ಉಳಿಸುವುದಿಲ್ಲ ಎಂದು ಕಿಡಿಗೇಡಿಗಳು ಪತ್ರದಲ್ಲಿ ಬರೆದಿದ್ದಾರೆ.ಈ ಬೆದರಿಕೆ ಹಿನ್ನೆಲೆ ಕಾರ್ಯಪ್ಪ ಅವರು ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು, ತಮಗೆ ರಕ್ಷಣೆ ನೀಡುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಆರೋಪಿ ಜೀಪ್‌ನಿಂದ ಬಿದ್ದು ಸಾವು ಪ್ರಕರಣ- ಮೂವರು ಪೊಲೀಸರ ವಿರುದ್ಧ FIR
Sign in to your account
Username or Email Address


Password

 Remember Me


