ಬೆಂಗಳೂರು: ಲಿವ್ ಇನ್ ರಿಲೇಶನ್‌ಶಿಪ್‍ನಲ್ಲಿದ್ದ (Live In Relationship) ಪ್ರೇಮಿಗಳ ನಡುವೆ ಜಗಳ ಶುರುವಾಗಿ ಪ್ರಿಯತಮೆಯ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.ನೇಪಾಳ (Nepal) ಮೂಲದ ಕೃಷ್ಣಕುಮಾರಿ (23) ಕೊಲೆಯಾದ ಯುವತಿ ಹಾಗೂ ನೇಪಾಳ ಮೂಲದ ಸಂತೋಷ್ ದಾಮಿ (27) ಕೊಲೆ ಮಾಡಿದ ಆರೋಪಿ. ಕೃಷ್ಣ ಕುಮಾರಿ ಹೊರಮಾವು ಯೂನಿಸೆಕ್ಸ್ ಸ್ಪಾದಲ್ಲಿ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದಳು. ಸಂತೋಷ್ ಟಿ.ಸಿ ಪಾಳ್ಯದಲ್ಲಿ ಬಾರ್ಬರ್ ಶಾಪ್‍ನಲ್ಲಿ ಕೆಲಸ ಮಾಡುತ್ತಿದ್ದ.ಈ ಇಬ್ಬರಿಗೂ ಪರಿಚಯವಾಗಿ ಪ್ರೇಮಾಂಕುರವಾಗಿತ್ತು. ಅದಾದ ಬಳಿಕ ಕೃಷ್ಣಕುಮಾರಿ ಹಾಗೂ ಸಂತೋಷ್ ಇಬ್ಬರು ಸೇರಿ ರಾಮೂರ್ತಿನಗರದ ಟಿಸಿಪಾಳ್ಯದಲ್ಲಿ ಬಾಡಿಗೆ ರೂಮ್‍ನ್ನು ಪಡೆದಿದ್ದಾರೆ. ಆ ಬಳಿಕ ಅದೇ ಬಾಡಿಗೆ ರೂಂನಲ್ಲೇ ಇಬ್ಬರೂ ವಾಸಿಸುತ್ತಿದ್ದರು. ಇದನ್ನೂ ಓದಿ: ಕಾಂಗ್ರೆಸ್‌ ರೌಡಿಗಳ ಪಕ್ಷ.. ಡಿಕೆಶಿ ತಿಹಾರ್‌ ಜೈಲಿಗೆ ಹೋಗಿ ಬಂದವರು – ಈಶ್ವರಪ್ಪ ತಿರುಗೇಟುಇಂದು ಬೆಳಗ್ಗೆ ಇಬ್ಬರ ನಡುವೆ ಜಗಳವಾಗಿದೆ. ಈ ವೇಳೆ ಜಗಳ ತಾರಕ್ಕೇರಿದ್ದು ಕೃಷ್ಣಕುಮಾರಿಯನ್ನು ಸಂತೋಷ್ ದಾಮಿ ಕೊಲೆ ಮಾಡಿದ್ದಾನೆ. ಘಟನೆ ಸಂಬಂಧ ರಾಮೂರ್ತಿನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಒಂದು ವರ್ಷದ ಹಿಂದೆ ಈ ಇಬ್ಬರೂ ಬೆಂಗಳೂರಿಗೆ ಬಂದಿರುವ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಇದನ್ನೂ ಓದಿ: ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪಗೆ ಜೀವ ಬೆದರಿಕೆ
Sign in to your account
Username or Email Address


Password

 Remember Me


