ಮಂಡ್ಯ: ಬಿಜೆಪಿ ಅವರಿಗೆ ಗಲಭೆ ಎಬ್ಬಿಸಲು ರೌಡಿಗಳು ಬೇಕು. ಅದೇ ಕಾರಣಕ್ಕೆ ರೌಡಿ ಶೀಟರ್‍ಗಳನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.ಮಂಡ್ಯ ಜಿಲ್ಲೆಯ ಕೆಆರ್ ಪೇಟೆ (KR Pete) ಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಇಬ್ಬರು ಎಂಪಿಗಳು ಬಿಜೆಪಿಯವರು ಸೈಲೆಂಟ್ ಸುನೀಲ( (Silent Sunila) ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಅವನು ಸರ್ಚ್ ವಾರೆಂಟ್‍ನಲ್ಲಿದ್ದಾನೆ. ಇಂಥವರ ಜೊತೆ ಓಡಾಡಿ ಸಮರ್ಥನೆ ಮಾಡಿಕೊಳ್ಳುತ್ತಾರೆ. ಬಿಜೆಪಿಯವರಿಗೆ ಇದು ಅಂಟು ರೋಗ ಆಗಿದೆ. ಅದರಲ್ಲೂ ಬಸವರಾಜ ಬೊಮ್ಮಾಯಿಗೆ ಜಾಸ್ತಿಯಾಗಿದೆ. ಏನೇ ಹೇಳಿದರು ಹಿಂದಿನ ಸರ್ಕಾರದಲ್ಲಿ ಆಗಿಲ್ವಾ ಅಂತಾರೆ. ನಿಮ್ಮ ತಪ್ಪುಗಳನ್ನು ಹೇಳಿ ಜನ ನಿಮಗೆ ಅಧಿಕಾರ ಕೊಟ್ಟಿಲ್ಲ. ನೀವು ಅನೈತಿಕವಾಗಿ ಬಂದಿದ್ದೀರಾ ಎಂದು ಕಿಡಿಕಾರಿದ್ರು.ನಮ್ಮನ್ನು ಬಿಡಿ ನೀವು ಏನು ಮಾಡಿದ್ದೀರಾ ಅಂತಾ ಹೇಳಿ ರೌಡಿ ಜೊತೆ ವೇದಿಕೆ ಹಂಚಿಕೊಂಡಿದ್ದು ಸರಿನಾ? ಫೈಟರ್ ರವಿ ಆಹಾ ಹೆಸರು ನೋಡು ಫೈಟರ್ ರವಿ (Fighter Ravi) ಅಂತೆ ಆರ್‍ಎಸ್‍ಎಸ್ (RSS) ಬಿಜೆಪಿ ಇಂತಹದ್ದೇ ಕೆಲಸ ಮಾಡುತ್ತದೆ. ಅಶಾಂತಿ ನಿರ್ಮಾಣ ಮಾಡಲು ಇಂತವರು ಅವರಿಗೆ ಬೇಕು ಸಮಾಜದಲ್ಲಿ ಅಶಾಂತಿ ಮೂಡಿಸಲು ಇಂತವರನ್ನು ಸೇರಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‍ (Congress) ನವರು ಜೈಲಿಗೆ ಹೋಗಿ ಬಂದಿದ್ದಾರೆ ಅಂತಾರೆ. ಇದನ್ನೂ ಓದಿ: ಮಾಜಿ ಸಿಎಂ ಸಿದ್ದರಾಮಯ್ಯ ಬಯೋಪಿಕ್‌ನಲ್ಲಿ ತಮಿಳು ನಟ ವಿಜಯ್ ಸೇತುಪತಿಅಮಿತ್ ಶಾ (AmitShah) ಎಲ್ಲಿ ಹೋಗಿದ್ದರು? ಏನು ಮಾವನ ಮನೆಗೆ ಹೋಗಿದ್ರಾ? ಅವರನ್ನು ಗಡಿಪಾರು ಮಾಡಿದ್ರು. ಈ ದೇಶದ ಹೋಮ್ ಮಿನಿಸ್ಟರ್‍ಗೆ ಮೂರು ವರ್ಷಕ್ಕೂ ಹೆಚ್ಚು ಜೈಲಾಗಿತ್ತು. ಅಂತವರೇ ಅಧ್ಯಕ್ಷರು ಹೋಮ್ ಮಿನಿಸ್ಟರ್ ಆಗಿದ್ದಾರೆ. ನಲಪಾಡ್ (Nalpad) ರೌಡಿ ಅಲ್ಲ ಅವನೇನು ರೌಡಿ ಶೀಟರ್ ಇದ್ದಾನಾ? ಅವನ ಮೇಲೆ ಕ್ರಿಮಿನಲ್ ಕೇಸ್ ಇದೆ ಅಷ್ಟೇ. ಅದು ಸಾಬೀತಾಗಿ ಠಾಣೆಯಲ್ಲಿ ಫೋಟೋ ಇದ್ದು ಶಿಕ್ಷೆ ಆದರೆ ಸರಿ. ಮೊಂಡುತನ ಮಾನ ಮರ್ಯಾದೆ ಇಲ್ಲದವು ಬರೀ ಭಂಢತನ ಮಾಡುತ್ತಾರೆ ಎಂದು ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
Sign in to your account
Username or Email Address


Password

 Remember Me


