ಬಳ್ಳಾರಿ: ಕಳೆದ ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ (Love Marriage) ಪೊಲೀಸ್ (Police) ಪೇದೆಯ ಪತ್ನಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟೆ ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ನಡೆದಿದೆ.ತೆಕ್ಕಲಕೋಟೆ ಠಾಣೆಯ ಪೇದೆ ರಮೇಶ್ ಪತ್ನಿ ರಾಜೇಶ್ವರಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ. ಕಳೆದ ರಾತ್ರಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಆದರೆ ಕುಟುಂಬಸ್ಥರು, ಪತಿ ರಮೇಶ್ ಕೊಲೆ ಮಾಡಿರುವುದಾಗಿ ಆರೋಪಿಸಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್‌ ಅಕ್ಷರ ಮಿತಿ 280ರಿಂದ 1,000ಕ್ಕೆ ಏರಿಕೆ – ಸುಳಿವು ನೀಡಿದ ಮಸ್ಕ್‌ಕಳೆದ ಎರಡು ವರ್ಷಗಳ ಹಿಂದೆ ಯುವತಿ ಮನೆಯವರ ವಿರೋಧದ ನಡುವೆಯೂ ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು (Love Marriage). 6 ತಿಂಗಳ ಹಿಂದೆಯಷ್ಟೇ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ನಿನ್ನೆ ಬೆಳಗಿನ ಜಾವ ಸಾವನ್ನಪ್ಪಿರುವ ಪತ್ನಿ ರಾಜೇಶ್ವರಿ ಶವವನ್ನು ಇದ್ದಕ್ಕಿದ್ದ ಹಾಗೆ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿರುವ ತವರು ಮನೆಗೆ ತೆಗೆದುಕೊಂಡು ಹೋಗಿದ್ದಾನೆ. ಇದನ್ನೂ ಓದಿ: 2024ರೊಳಗೆ Air India ಜೊತೆ ವಿಸ್ತಾರಾ ವಿಲೀನ – 2 ಸಾವಿರ ಕೋಟಿ ಹೂಡಿಕೆಗೆ ಟಾಟಾ ಚಿಂತನೆಸಾವು ಹೇಗಾಯ್ತು ಎಂದು ಕೇಳುತ್ತಿದ್ದಂತೆ ರಮೇಶ್ ಒಮ್ಮೆ ನೇಣಿಗೆ ಶರಣಾದಳು, ಮತ್ತೊಮ್ಮೆ ಫಿಡ್ಸ್ ಬಂತು, ಮಗದೊಮ್ಮೆ ಲೋ ಬಿಪಿಯಿಂದ ಸಾವಾಗಿದೆ ಎಂದು ವಿಚಿತ್ರವಾಗಿ ಉತ್ತರಿಸಿದ್ದಾನೆ. ಇದರಿಂದ ಅನುಮಾನಗೊಂಡ ಪತ್ನಿ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಪತ್ನಿಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ (Bellary Hospital) ರವಾನಿಸಲಾಗಿದೆ.
Sign in to your account
Username or Email Address


Password

 Remember Me


