ಕಲಬುರಗಿ: ಜಿಲ್ಲೆಯ ಚಿತ್ತಾಪುರ (Chittapur) ಕ್ಷೇತ್ರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಮಲ ಪಕ್ಷ ಅರಳಿಸಲು ಬಿಜೆಪಿ (BJP) ಮುಖಂಡ ಮಣಿಕಂಠ ರಾಠೋಡ್‌ ತಿರುಪತಿ ತಿಮ್ಮಪ್ಪನ (Tirupati Temple) ಮೆಟ್ಟಿಲುಗಳನ್ನು ಮೊಣಕಾಲಿನಿಂದ ಹತ್ತಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರಾರ್ಥನೆ ಸಲ್ಲಿಸಿದರು.ತಿರುಪತಿ ತಿಮ್ಮಪ್ಪನ ಸಪ್ತಗಿರಿ ಬೆಟ್ಟವನ್ನು ಮೊಣಕಾಲಿನಿಂದ ಹತ್ತಿ ವಿಶೇಷ ಪೂಜೆ ಸಲ್ಲಿಸಿ, ಶತಾಯಗತಾಯವಾಗಿ ಕಾಂಗ್ರೆಸ್ (Congress) ಪಕ್ಷವನ್ನು ಕೆಡವಲು ತಮ್ಮ ಹರಕೆಯನ್ನು ಸಲ್ಲಿಸಿದರು. ಜೊತೆಗೆ ಕ್ಷೇತ್ರದ ಜನರ ಒಳಿತಿಗಾಗಿ ತಾಲೂಕಿನಲ್ಲಿ ಸುಖ ಸಮೃದ್ಧಿ ನೆಲೆಸಲಿ. ಚಿತ್ತಾಪುರ ತಾಲೂಕಿನ ಜನರಿಗೆ ಯಾವುದೇ ರೀತಿಯ ಕಷ್ಟಕಾರ್ಪಣ್ಯಗಳು ಬರದಂತೆ, ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಮಣಿಕಂಠ ರಾಠೋಡ್ ಅವರು ಮೊಣಕಾಲಿನ ಮೂಲಕ ಪಾದಯಾತ್ರೆ ಮಾಡುವ ಮೂಲಕ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಪ್ರಾರ್ಥಿಸಿಕೊಂಡರು. ಇದನ್ನೂ ಓದಿ: ಈ ದೇಶದ ಗೃಹ ಸಚಿವರ ವಿರುದ್ಧವೇ ಮರ್ಡರ್ ಕೇಸ್ ಇದೆ – ಸಿದ್ದರಾಮಯ್ಯಇನ್ನೂ ಚಿತ್ತಾಪುರ ಕ್ಷೇತ್ರದಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ಸೋಲಿಸುವುದೊಂದೆ ನಮ್ಮ ಗುರಿಯಾಗಿದೆ ಎಂದು ಬಿಜೆಪಿ ಹೇಳಿದ ಬೆನ್ನಲ್ಲೇ, ಮುಖಂಡ ಮಣಿಕಂಠ ರಾಠೋಡ್‌ ಅವರು ತಿಮ್ಮಪ್ಪನ ಬಳಿ ಬೇಡಿಕೊಂಡಿದ್ದಾರೆ. ಇದನ್ನೂ ಓದಿ: ಅಯ್ಯಪ್ಪ ಮಾಲಾಧಾರಿಗಳೊಂದಿಗೆ ಶಬರಿಮಲೆಗೆ ಪಾದಯಾತ್ರೆ‌ ಹೊರಟ ಬೀದಿನಾಯಿ
Sign in to your account
Username or Email Address


Password

 Remember Me


