`ಬಿಗ್ ಬಾಸ್’ (Bigg Boss) ಖ್ಯಾತಿಯ ನಿವೇದಿತಾ ಗೌಡ(Niveditha Gowda) ಪ್ರವಾಸಿಗರ ಸ್ವರ್ಗ ಬಾಲಿಗೆ ಹಾರಿದ್ದಾರೆ. ಒಂಟಿಯಾಗಿ ತಮ್ಮ ಪ್ರವಾಸದ ದಿನವನ್ನ ಎಂಜಾಯ್ ಮಾಡ್ತಿದ್ದಾರೆ. ಹೀಗಿರುವಾಗ ಇದೀಗ ಮತ್ತೆ ಟ್ರೋಲಿಗರ ಬಾಯಿಗೆ ನಿವಿ ಗುರಿಯಾಗಿದ್ದಾರೆ. ಬಿಕಿನಿ ತೊಟ್ಟ ನಟಿಗೆ ನೆಟ್ಟಿಗರು ಫುಲ್ ತರಾಟೆಗೆ ತೆಗೆದುಕೊಂಡಿದ್ದಾರೆ. ನಿವೇದಿತಾ ಶೇರ್ ಮಾಡಿರುವ ಬಿಕಿನಿ ವೀಡಿಯೋ ಈಗ ಸಖತ್ ಸದ್ದು ಮಾಡುತ್ತಿದೆ.  A post shared by Niveditha Gowda ???? (@niveditha__gowda)ಸದಾ ಟ್ರೋಲ್ ಆಗುವ ನಿವೇದಿತಾ (Niveditha Gowda) ಈ ಬಾರಿ ತುಸು ಜಾಸ್ತಿಯೇ ಟ್ರೋಲ್ ಆಗಿದ್ದಾರೆ. ಬಾಲಿಯಲ್ಲಿ (Bali) ಏಕಾಂಗಿಯಾಗಿ ಎಂಜಾಯ್ ಮಾಡ್ತಿರುವ ನಟಿ, ಬಿಕಿನಿಯಲ್ಲಿ ಸೊಂಟ ಬಳುಕಿಸಿದ್ದಾರೆ. ಮದುವೆ ಆದ ಮೇಲೆ ಹೇಗಿರಬೇಕು ಎಂದು ನಟಿಗೆ ನೆಟ್ಟಿಗರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ನಿನ್ನ ಗಂಡನ ಮುಂದೆ ನಿನ್ನನ್ನು ಪ್ರದರ್ಶಿಸು, ಸಾರ್ವಜನಿಕ ಮುಂದೆ ಅಲ್ಲ ಎಂದು ನಿವೇದಿತಾ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ. ಇದನ್ನೂ ಓದಿ:ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ಅನಿರುದ್ಧ್-ಅನು ಜೋಡಿ  A post shared by Niveditha Gowda ???? (@niveditha__gowda)ಬಾಲಿಗೆ ತೆರಳಿದ್ದ ನಟಿಗೆ ಚಂದನ್ ಶೆಟ್ಟಿ (Chandan Shetty) ಎಲ್ಲಿ ಎಂದು ಟ್ರೋಲ್ ಮಾಡಿದ್ದರು. ನಿವಿ ಬಿಕಿನಿ ಅವತಾರಕ್ಕೆ ಫ್ಯಾನ್ಸ್ ರಾಂಗ್ ಆಗಿದ್ದಾರೆ. ಮದುವೆ ಆದ ಮೇಲೆ ರಾಧಿಕಾ ಪಂಡಿತ್ ಹೇಗಿದ್ದಾರೆ ನೋಡಿ. ಅವರನ್ನ ನೋಡಿ ಕಲಿಯಿರಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಚಂದನ್ ಶೆಟ್ಟಿ ಅವರನ್ನ ಮಾರಿಕೊಂಡು ತಿನ್ನುತ್ತೀರಾ ಎಂದು ಕಿಡಿಕಾರಿದ್ದಾರೆ. ನಿನ್ನ ಗಂಡನ ಮುಂದೆ ನಿನ್ನನ್ನು ಪ್ರದರ್ಶಿಸು, ಸಾರ್ವಜನಿಕ ಮುಂದೆ ಅಲ್ಲ ಎಂದು ನೆಟ್ಟಿಗರು ಫುಲ್ ರಾಂಗ್ ಆಗಿದ್ದಾರೆ.
Sign in to your account
Username or Email Address


Password

 Remember Me


