ಮಡಿಕೇರಿ: ಮೇಯಲು ಕಟ್ಟಿಹಾಕಿದ್ದ ಹಸುವಿನ (Cow) ಮೇಲೆ ಲೈಂಗಿಕ ತೃಷೆ (Sexual Assault) ತೀರಿಸಿಕೊಂಡು ಹೇಯ ಕೃತ್ಯ ಎಸಗುತ್ತಿದ್ದ ವ್ಯಕ್ತಿಯೊಬ್ಬನನ್ನು ಸ್ಥಳೀಯ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಕೊಡಗು (Kodagu) ಜಿಲ್ಲೆ ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಸಮೀಪದ ಅಂದಗೋವೆ ಎಂಬಲ್ಲಿ ನಡೆದಿದೆ.ನವೆಂಬರ್ 27ರಂದು ಈ ಒಂದು ಹೇಯ್ಯ ಕೃತ್ಯ ಬೆಳಕಿಗೆ ಬಂದಿದ್ದು, ಪೊಲೀಸರು ಆರೋಪಿಯ ವಿರುದ್ಧ ಮೊಕದ್ದಮೆ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಪೊಲೀಸ್ ಮಾಹಿತಿಯ ಪ್ರಕಾರ ಸುಂಟಿಕೊಪ್ಪ ಸಮೀಪದ ಅಂದಗೋವೆ ಗ್ರಾಮದ ಸಿ.ಎ ದೇವಯ್ಯ ಅವರಿಗೆ ಸೇರಿದ ಹಸುವನ್ನು ಮೇಯಲು ಬಿಟ್ಟಿದ್ದು ತಾವು ಸಂತೆಗೆ ಹೋಗಿ ವಾಪಸ್ ಬರುವ ಸಂದರ್ಭ ತಮ್ಮ ಗದ್ದೆಯ ದಾರಿಯಲ್ಲಿ ಮೋಟಾರ್ ಬೈಕ್ ನಿಂತಿದ್ದನ್ನು ಗಮನಿಸಿದ್ದಾರೆ. ಇದನ್ನೂ ಓದಿ: ತಡರಾತ್ರಿ ಎಟಿಎಂಗೆ ಪೂಜೆ – ಕಳ್ಳತನಕ್ಕೆ ಯತ್ನವೋ, ವಾಮಾಚಾರವೋ!?ದೇವಯ್ಯ ಮನೆ ಹೋಗಿ ಮೇಯಲು ಬಿಟ್ಟಿದ್ದ ಹಸುವನ್ನು ವಾಪಸ್ ಕೊಟ್ಟಿಗೆಗೆ ತರಲು ಹೋದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಹಸುವಿನ ಮೇಲೆ ಪೈಶಾಚಿಕ ಕೃತ್ಯ ಎಸಗುತ್ತಿರುವುದನ್ನು ನೋಡಿ ಆತನನ್ನು ಹಿಡಿದು ವಿಚಾರಿಸಿದ್ದಾರೆ. ಆರೋಪಿ ಸುಂಟಿಕೊಪ್ಪ ಪಂಪ್ ಹೌಸ್ ನಿವಾಸಿ ಅಬೂಬಕ್ಕರ್ ಸಿದ್ಧಿಕ್ ಎಂದು ತಿಳಿದು ಬಂದಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಹನಿಟ್ರ್ಯಾಪ್ ಚಕ್ರವ್ಯೂಹ- ಸಂಸಾರ, ಕೆಲಸ, ಎಲ್ಲವೂ ಕಳೆದುಕೊಂಡ ಟೆಕ್ಕಿ!ಸಿದ್ಧಿಕ್‌ನ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 377 ಪ್ರಕಾರ ಮೊಕದ್ದಮೆ ದಾಖಲಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಈ ಸಂದರ್ಭ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ.
Sign in to your account
Username or Email Address


Password

 Remember Me


