– ಸಿಎಂ, ಗೃಹ ಸಚಿವರ ಒತ್ತಡದಲ್ಲೇ ಅಧಿಕಾರಿಗಳು ಕೆಲಸ ಮಾಡ್ತಿದ್ದಾರೆ: ಮಾಜಿ ಐಪಿಎಸ್ ಅಧಿಕಾರಿಕೊಪ್ಪಳ: ಪ್ರತಿದಿನ ಪೊಲೀಸ್ ಅಧಿಕಾರಿಗಳು ಕಲೆಕ್ಷನ್ ಮಾಡ್ಲೇಬೇಕು. ಬೆಂಗಳೂರಲ್ಲಿ ಪ್ರತಿದಿನ ಕಲೆಕ್ಷನ್ ದುಡ್ಡು ಬಂದಿಲ್ಲ ಅಂದ್ರೆ ಸಂಜೆಗೆ ಪೊಲೀಸರು ವಿಲಿವಿಲಿ ಆಗಿ ಬಿಡ್ತಾರೆ ಎಂದು ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ (Bhaskar Rao) ಬೇಸರ ಹೊರಹಾಕಿದ್ದಾರೆ.ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದಲ್ಲಿ ಅವರು ಮಾತನಾಡಿದರು. ಈ ವೇಳೆ ಪಿಎಸ್‍ಐ ಪರಶುರಾಮ್ (PSI Parashuram) ಸಾವಿನ ವಿಚಾರವಾಗಿ ಪ್ರತಿಕ್ರಿಯಿಸಿ, ಸರ್ಕಾರದಲ್ಲಿ ಎಲ್ಲಾ ಅಧಿಕಾರಿಗಳು ಒತ್ತಡದಲ್ಲೇ ಕೆಲಸ ಮಾಡಬೇಕು. ಸಿಎಂ ಹಾಗೂ ಗೃಹ ಸಚಿವರ ಒತ್ತಡದಲ್ಲೇ ಕೆಲಸ ಮಾಡ್ತಿದ್ದಾರೆ. ಮೊದಲು ಶಾಸಕರು ಹಾಗೂ ಸಚಿವರು ವರ್ಗಾವಣೆ ವಿಚಾರವಾಗಿ ಮನವಿ ಮಾಡ್ತಿದ್ರು. ಈಗ ಅದು ದಂಧೆಯಾಗಿ ಬದಲಾಗಿದೆ ಎಂದು ಆರೋಪಿಸಿದ್ದಾರೆ.ಈ ಬೆಳವಣಿಗೆಯನ್ನು ಸಣ್ಣಪುಟ್ಟವರು ಕಂಟ್ರೋಲ್ ಮಾಡೋಕೆ ಆಗಲ್ಲ. ದೊಡ್ಡವರಿಂದಲೇ ಎಲ್ಲಾ ಕಂಟ್ರೋಲ್ ಮಾಡಬೇಕು. ಈಗ ಒಂದು ರೂಟ್ ಮ್ಯಾಪ್ ಹಾಕಲಾಗಿದೆ. ಇಲಾಖೆಯಲ್ಲಿ ದಿನದ ವಸೂಲಿ ಶುರುವಾಗಿದೆ. ಪ್ರತಿ ದಿನ ಪೊಲೀಸ್ ಅಧಿಕಾರಿಗಳು ಕಲೆಕ್ಷನ್ ಮಾಡಲೇಬೇಕು. ಈ ವ್ಯವಸ್ಥೆ ನಾನು ಇದ್ದಾಗಲೂ ಇತ್ತೂ, ಈಗಲೂ ಇದೆ. ಮುಂದೇನು ಇರಲಿದೆ ಎಂದು ಕಿಡಿಕಾರಿದ್ದಾರೆ.Sign in to your account
Username or Email Address


Password

 Remember Me


