ಮಂಗಳೂರು: ನಟ ಯಶ್‌ (Yash) ಅವರು ಬೆಳ್ತಂಗಡಿ ತಾಲೂಕಿನಲ್ಲಿರುವ ಉಜಿರೆಯ ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನಕ್ಕೆ (Shree Sadashiva Rudra Temple) ಕುಟುಂಬ ಸಮೇತರಾಗಿ ಭೇಟಿ ನೀಡಿದ್ದಾರೆ.ಇಂದು ಬೆಳಗ್ಗೆ ನಟಿ ರಾಧಿಕಾ, ಮಕ್ಕಳ ಜೊತೆ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ವೇಳೆ ಕುಟುಂಬದ ಮಣ್ಣಿನ ಮೂರ್ತಿ ಮತ್ತು ಮಣ್ಣಿನ ಫಿಲ್ಮ್ ರೀಲ್‌ ಹರಕೆಯನ್ನು ಯಶ್‌ ತೀರಿಸಿದರು.ಈ ಭೇಟಿಯ ವೇಳೆ ಟಾಕ್ಸಿಕ್ (Toxic) ಚಲನಚಿತ್ರದ ನಿರ್ಮಾಪಕ ವೆಂಕಟ್‌ ಅವರು ಸಾಥ್ ನೀಡಿದರು.ಸುರ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಯಶ್‌ ಅವರು ಧರ್ಮಸ್ಥಳ ಶ್ರೀ ಮಂಜುನಾಥ ದೇವಸ್ಥಾನಕ್ಕೆ (Shri Dharmasthala Manjunatheshwara Temple) ಭೇಟಿ ನೀಡಲಿದ್ದಾರೆ. Sign in to your account
Username or Email Address


Password

 Remember Me


