ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ (Karnataka Maharshi Valmiki Scheduled Tribe Development Corporation Ltd) ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದ್ದು ಆರೋಪಿಗಳ ಮನೆಯಿಂದ ಕೋಟಿ ಕೋಟಿ ಹಣವನ್ನು ಜಪ್ತಿ ಮಾಡಲಾಗಿದೆ.ವಾಲ್ಮಿಕಿ ನಿಗಮ ಹಗರಣದ ತನಿಖೆ ನಡೆಸಿದ್ದ ಎಸ್‌ಐಟಿ (SIT) ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. 3072 ಪುಟಗಳ ದೋಷಾರೋಪ ಪಟ್ಟಿಯಲ್ಲಿ ಮಾಜಿ ಸಚಿವ ನಾಗೇಂದ್ರ (Nagendra) ಮತ್ತು ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್‌ರನ್ನು (Basanagouda Daddal) ಆರೋಪಿಯಾಗಿಸಿಲ್ಲ.ನಿಗಮದ ಮಾಜಿ ವ್ಯವಸ್ಥಾಪಕ ಜೆ.ಬಿ.ಪದ್ಮನಾಭ, ಮಾಜಿ ಲೆಕ್ಕಾಧಿಕಾರಿ ಪರಶುರಾಮ್‌ ದುರ್ಗಣ್ಣನವರ್‌, ಹೈದರಾಬಾದ್‌ನ ಫಸ್ಟ್‌ ಫೈನಾನ್ಸ್ ಕ್ರೆಡಿಟ್‌ ಕೋ ಆಪರೇಟಿವ್ ಬ್ಯಾಂಕ್‌ ಅಧ್ಯಕ್ಷ ಸತ್ಯನಾರಾಯಣ ಇಟಕಾರಿ, ನೆಕ್ಕಂಟೆ ನಾಗರಾಜ್, ನಾಗರಾಜ್ ಅವರ ಸಂಬಂಧಿ ನಾಗೇಶ್ವರ ರಾವ್‌, ಹೈದರಾಬಾದ್‌ನ ಮಧ್ಯವರ್ತಿಗಳಾದ ಎಂ.ಚಂದ್ರಮೋಹನ್, ಗಾದಿರಾಜು ಸತ್ಯನಾರಾಯಣ ವರ್ಮಾ, ಉಡುಪಿಯ ಜಿ.ಕೆ.ಜಗದೀಶ್‌, ಬೆಂಗಳೂರಿನ ತೇಜ ತಮ್ಮಯ್ಯ, ಆಂಧ್ರಪ್ರದೇಶದ ಗಚ್ಚಿಬೌಲಿ ಪಿಟ್ಟಲ ಶ್ರೀನಿವಾಸ, ಹೈದರಾಬಾದ್‌ನ ಸಾಯಿತೇಜ, ಆಂಧ್ರಪ್ರದೇಶದ ಕಾಕಿ ಶ್ರೀನಿವಾಸ್‌ ಅವರನ್ನು ಬಂಧಿಸಲಾಗಿದೆ ಎಂಬ ಉಲ್ಲೇಖವಿದೆ. ಇದನ್ನೂ ಓದಿ: ಮಹಾರಾಷ್ಟ್ರದಿಂದ 1.20 ಲಕ್ಷ ಕ್ಯುಸೆಕ್‌ ನೀರು ಬಿಡುಗಡೆ – ಭೀಮಾ ನದಿ ಪಾತ್ರದಲ್ಲಿ ಪ್ರವಾಹ ಭೀತಿ 
ಪ್ರತಿಯೊಬ್ಬ ಆರೋಪಿಯಿಂದ ಸೀಜ್ ಮಾಡಿದ ನಗದು ಹಾಗೂ ಚಿನ್ನ ಎಷ್ಟು ಎಂಬ ಮಾಹಿತಿಯನ್ನು ಎಸ್‌ಐಟಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.ಯಾರ ಬಳಿ ಎಷ್ಟು ಹಣ ಜಪ್ತಿ?
ಸತ್ಯ ನಾರಾಯಣ ವರ್ಮನ ಮನೆಯಿಂದ 10.95 ಕೋಟಿ ರೂ., ಪದ್ಮನಾಭ್‌ ನಿವಾಸದಿಂದ 3.92 ಕೋಟಿ ರೂ., ನಾಗೇಶ್ವರ್ ನಿವಾಸದಿಂದ 1.49 ಕೋಟಿ ರೂ., ಚಂದ್ರಮೋಹನ್ ಮನೆಯಿಂದ 30 ಲಕ್ಷ ರೂ., ಜಿಪಿ ಜಗದೀಶ್ ನಿವಾಸದಿಂದ  12 ಲಕ್ಷ ರೂ. ಹಣ ಜಪ್ತಿ ಮಾಡಲಾಗಿದೆ. ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಕ್ಷಿಪ್ರಕ್ರಾಂತಿ – ಹಿಂದೂ ದೇವಸ್ಥಾನಗಳ ಮೇಲೆ ಪುಂಡರ ದಾಳಿಚಿನ್ನ ಎಷ್ಟು ಜಪ್ತಿ?
ಚಂದ್ರಮೋಹನ್ ಮನೆಯಿಂದ – 207 ಗ್ರಾಂ (14.90 ಲಕ್ಷ ರೂ.)
ಜಿಕೆ ಜಗದೀಶ್ – 47.6 ಗ್ರಾಂ ( 3.42 ಲಕ್ಷ ರೂ.)
ಸತ್ಯನಾರಾಯಣ ವರ್ಮ – 15 ಕೆಜಿ ಚಿನ್ನ (10.80 ಕೋಟಿ ರೂ.), ಒಂದು ಲ್ಯಾಂಬೋರ್ಗಿನಿ ಉರುಸ್ – 3.31 ಕೋಟಿ ರೂ. , ಮರ್ಸಿಡಿಸ್ ಬೆಂಜ್ 1.21 ಕೋಟಿ ರೂ.
ಕಾಕಿ ಶ್ರೀನಿವಾಸ್ -1 ಕೆಜಿ ಚಿನ್ನ (72 ಲಕ್ಷ ರೂ.) Sign in to your account
Username or Email Address


Password

 Remember Me


