ಯಾದಗಿರಿ: ಒಂದು ವಾರದಲ್ಲಿ ಸಿದ್ದರಾಮಯ್ಯ (CM Siddaramaiah) ರಾಜೀನಾಮೆ ಕೊಡ್ತಾರೆ, ಸರ್ಕಾರ ಉರುಳುತ್ತದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಸ್ಫೋಟಕ ಹೇಳಿಕೆ ನೀಡಿದ್ದಾರೆ.ಜಿಲ್ಲೆಯಲ್ಲಿ ಮಾಧ್ಯದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಇನ್ನೊಂದು ವಾರ ಇರುವುದು ಕಷ್ಟ. ಒಂದು ವಾರದಲ್ಲಿ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರೆ, ಸರ್ಕಾರ ಉರುಳುತ್ತದೆ. ಜಗ್ಗುವುದಿಲ್ಲ, ಬಗ್ಗುವುದಿಲ್ಲ ಅಂತ ಹೇಳಿದ್ದರು. ಮೊನ್ನೆ ರಾತ್ರಿಯೇ ಜಗ್ಗಿದು ಆಯ್ತು. ಗ್ಗಿದು ಆಯ್ತು. ಇನ್ನೆನೂ ಉಳಿದಿದೆ. ಈ ಸರ್ಕಾರ ರಾಜ್ಯದಲ್ಲಿ ಇರಲಿಕ್ಕೆ ಸಾಧ್ಯವಿಲ್ಲ. ಯಾಕೆಂದರೆ ಇದು ಪಾಪದ ಸರ್ಕಾರ. ಜನರಿಗೆ ಸುಳ್ಳು ಹೇಳಿ, ವಂಚನೆ ಮಾಡಿ ಅಧಿಕಾರಕ್ಕೆ ಬಂದಿರುವ ಸರ್ಕಾರ ಇದು ಕಿಡಿಕಾರಿದ್ದಾರೆ.ಇದನ್ನೂ ಓದಿ: ಸಿದ್ದರಾಮಯ್ಯ ಜೀವನಾಧಾರಿತ ಸಿನಿಮಾದ ಶೂಟಿಂಗ್‌ಗೆ ತಾತ್ಕಾಲಿಕ ಬ್ರೇಕ್‌ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರೇ ಸರ್ಕಾರ ಬಿದ್ದ ಹಾಗೇ ಅಲ್ಲವಾ. ಕಾಂಗ್ರೆಸ್‌ನಲ್ಲೇ (Congress) ಸಿಎಂ ಸ್ಥಾನಕ್ಕಾಗಿ ಹತ್ತು ಜನ ಬಟ್ಟೆ ಹೊಲಿಸಿಕೊಂಡು ಕೂತಿದ್ದಾರೆ. ಸಿಎಂ ಬದಲಾವಣೆ ಆದರೇ ದಲಿತರೇ ಸಿಎಂ ಆಗಬೇಕು. ಯಾಕೆಂದರೆ 77 ವರ್ಷ ಜೈಲಿನಲ್ಲಿ ಇಟ್ಟುಕೊಂಡ ಹಾಗೇ ಕಬ್ಜಾ ಮಾಡಿಕೊಂಡು ಮತ ಪಡೆದಿದ್ದೀರಿ. ದಲಿತರ ಮತ ಪಡೆದು ಅವರಿಗೆ ಅನ್ಯಾಯ ಮಾಡ್ತಿದ್ದೀರಿ. ದಲಿತರನ್ನ ಸಿಎಂ ಮಾಡಿ ಇಲ್ಲದೇ ಇದ್ದರೆ ಅವರ ಕೋಪಕ್ಕೆ ನೀವು ಗುರಿ ಆಗುತ್ತೀರಿ ಎಂದು ಹೇಳಿದರು.ಆರ್.ಅಶೋಕ್ ಬಿಡಿಎ ಜಮೀನು ವಾಪಸ್ ನೀಡಿರುವ ವಿಚಾರವಾಗಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಮುಡಾ ನಿವೇಶನ ಕೇಸಿಗೂ ಆರ್.ಅಶೋಕ್ ಕೇಸ್‌ಗೂ ಸಂಬಂಧವಿಲ್ಲ. ಆರ್.ಅಶೋಕ್ (R Ashok) ವಾಪಸ್ ಕೊಟ್ಟಿರೋದರಲ್ಲಿ ಏನು ತಪ್ಪಿದೆ. ನೀವು ತೊಡೆತಟ್ಟಿ ಹೋಗಿ ನಂತರ ಸೈಟ್ ವಾಪಸ್ ಕೊಟ್ಟಿದ್ದೀರಿ. ಅವತ್ತೇ ಸಿಎಂ ಸಿದ್ದರಾಮಯ್ಯ ಅವರು ಸೈಟ್ ವಾಪಸ್ ಕೊಡಬೇಕಿತ್ತು. ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವಾಗ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸೈಟ್ ವಾಪಸ್ ಕೊಟ್ಟರೆ ಈಗ ಕ್ಷಮೆ ಇಲ್ಲ ಎಂದು ತಿಳಿಸಿದರು.ಇದನ್ನೂ ಓದಿ: ಸರ್ಕಾರ ಉರುಳಿಸುವ ದುರಾಲೋಚನೆ ಬರದಿರಲಿ: ದಸರಾ ಉದ್ಘಾಟಿಸಿ ಹಂಪ ನಾಗರಾಜಯ್ಯSign in to your account
Username or Email Address


Password

 Remember Me


