ಬೆಂಗಳೂರು: ಎರಡನೇ ವಿವಾಹಕ್ಕೆ ನಿರಾಕರಿಸಿದ ಮಾಜಿ ಪ್ರೇಯಸಿಗೆ ವ್ಯಕ್ತಿಯೊಬ್ಬ ಚಾಕು ಇರಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.ಚಾಕು ಇರಿತಕ್ಕೊಳಗಾದವಳನ್ನು ಅಮುದಾ (Amuda) ಎಂದು ಗುರುತಿಸಲಾಗಿದ್ದು, ಈಕೆ ಇಂದಿರಾನಗರ ನಿವಾಸಿಯಾಗಿದ್ದಾಳೆ. ಆಟೋ ಚಾಲಕ ನವಾಝ್ ಚಾಕು ಇರಿದ ಆರೋಪಿ.ಕೆಲ ವರ್ಷಗಳ ಹಿಂದೆ ಅಮುದಾ ಹಾಗೂ ನಯಾಝ್ ಪ್ರೀತಿಸುತ್ತಿದ್ದರು. ಈ ನಡುವೆ ನವಾಝ್ ಬೇರೆಯವರ ಜೊತೆ ಮದುವೆಯಾಗಿದ್ದ. ಇತ್ತ ಅಮುದಾ ಏಳುಮಲೈ ಎಂಬಾತನ ಜೊತೆ ಮದುವೆಯಾಗಿದ್ದಳು. ನಂತರ ಮತ್ತೆ ಪರಸ್ಪರ ಸಂಪರ್ಕಕ್ಕೆ ಬಂದಿದ್ದ ಮಾಜಿ ಪ್ರೇಮಿಗಳು. ಈ ವೇಳೆ ನವಾಝ್, ನಿನ್ನ ಪತಿ ಸರಿ ಇಲ್ಲ ಎರಡನೇ ಮದ್ವೆಯಾಗು (2nd Marriage) ಎಂದಿದ್ದ. ಆದರೆ ಇದಕ್ಕೆ ಅಮುದಾ ನಿರಾಕರಿಸಿದ್ದಳು.ಈ ವಿಚಾರವಾಗಿ ಏಳು ಮಲೈ ಬೇಸತ್ತು ಹೋಗಿದ್ದ. ಅಲ್ಲದೆ ನಂತರ ಪತ್ನಿ ಮಕ್ಕಳಿಂದ ದೂರವಾಗಿದ್ದ. ಗಂಡ ಬಿಟ್ಟ ಹಿನ್ನೆಲೆ ಇಂದಿರಾನಗರದಲ್ಲಿ ಬಂದು ನೆಲೆಸಿದ್ದ. ಪ್ರತಿಸಲ ಪೀಡಿಸುತ್ತಿದ್ದ ನವಾಝ್ ಕೊನೆಗೆ ಅಮುದಾಗೆ ಚಾಕು ಇರಿದಿದ್ದ, ಬಳಿಕ ಪರಾರಿಯಾಗಿದ್ದ.ಇಂದಿರಾನಗರ ಪೊಲೀಸ್ ಠಾಣೆ (Indiranagar Police Station) ಯಲ್ಲಿ ದೂರು ದಾಖಲಾಗಿದೆ.
Sign in to your account
Username or Email Address


Password

 Remember Me


