ಇತ್ತೀಚೆಗೆ ಯಂಗ್ ರೆಬಲ್ ಸ್ಟಾರ್ ಅಭಿಷೇಕ್(Young Rebel Star Abhishek) ತಮ್ಮ ಮದುವೆಯ ವಿಚಾರವಾಗಿ ಸಖತ್ ಸುದ್ದಿಯಾಗಿದ್ದರು. ಬಳಿಕ ನಟಿ ಸುಮಲತಾ ಅಂಬರೀಶ್(Sumalatha) ಮದುವೆ ವದಂತಿಗೆ ಬ್ರೇಕ್ ಹಾಕಿದ್ದರು. ಈ ಬೆನ್ನಲ್ಲೇ ಮತ್ತೆ ಯಂಗ್ ರೆಬಲ್ ಹೀರೋ ಮತ್ತೆ ಸುದ್ದಿಯಾಗಿದ್ದಾರೆ. ಮೊದಲ ಬಾರಿಗೆ ಮೆಟ್ರೋದಲ್ಲಿ ಅಭಿಷೇಕ್ ಅಂದರೀಶ್ ಜರ್ನಿ ಮಾಡಿದ್ದಾರೆ.`ಅಮರ್’ ಸಿನಿಮಾದ ಮೂಲಕ ಚಂದನವನಕ್ಕೆ ಪರಿಚಿತರಾದ ಪ್ರತಿಭಾನ್ವಿತ ನಟ ಅಭಿಷೇಕ್ ಇದೀಗ `ಬ್ಯಾಡ್ ಮ್ಯಾನರ್ಸ್’ ಮೂಲಕ ಸದ್ದು ಮಾಡ್ತಿದ್ದಾರೆ. ಇದೀಗ ನಿರ್ದೇಶಕ ಮಹೇಶ್ ಕುಮಾರ್ (Mahesh Kumar) ಜೊತೆ ಮೆಟ್ರೋದಲ್ಲಿ ಜರ್ನಿ ಮಾಡಿದ್ದಾರೆ. ಮೊದಲ ಬಾರಿಗೆ ಮೆಟ್ರೋದಲ್ಲಿ ಸಾರ್ವಜಿನಿಕರ ಮಧ್ಯೆ ತಾವು ಒಬ್ಬರಾಗಿ ಪ್ರಯಾಣ ಬೆಳೆಸಿದ್ದಾರೆ. ಸಿಲ್ಕ್ ಇನ್‌ಸ್ಟಿಟ್ಯೂಟ್ ಸಾರಕ್ಕಿ ಜೆ.ಪಿ ನಗರದವೆಗೂ ಅಭಿಷೇಕ್ ಮತ್ತು ನಿರ್ದೇಶಕ ಮಹೇಶ್ ಕುಮಾರ್ ಟ್ರಾವೆಲ್ ಮಾಡಿದ್ದಾರೆ. ಇದನ್ನೂ ಓದಿ:ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ರು `ಅಗ್ನಿಸಾಕ್ಷಿ’ಯ ವೈಷ್ಣವಿ ಗೌಡನಟ ಅಭಿಷೇಕ್ ಮಹೇಶ್ ಕುಮಾರ್ ಜೊತೆ `ಬ್ಯಾಡ್ ಮ್ಯಾನರ್ಸ್’ (Bad Manners) ಚಿತ್ರಕ್ಕಾಗಿ ಕೈ ಜೋಡಿಸಿದ್ದಾರೆ. ಡೈರೆಕ್ಟರ್ ಕೃಷ್ಣ ಜೊತೆ ಕಾಳಿ ಸಿನಿಮಾ ಮಾಡಲಿದ್ದಾರೆ. ಈ ಸಿನಿಮಾಗೆ `ಕಾಂತಾರ’ (Kantara Film) ಬ್ಯೂಟಿ ಸಪ್ತಮಿ ಗೌಡ ನಾಯಕಿಯಾಗಿ ನಟಿಸಲಿದ್ದಾರೆ.
Sign in to your account
Username or Email Address


Password

 Remember Me


