ರಾಯಚೂರು: ಯುವಕನನ್ನು (Young Man) ಕೊಲೆ ಮಾಡಿ ನಡುರಸ್ತೆಯಲ್ಲಿ ಬೀಸಾಡಿ ಆರೋಪಿಗಳು ಪರಾರಿಯಾಗಿರುವ ಘಟನೆ ರಾಯಚೂರು (Raichur) ತಾಲೂಕಿನ ಮಲಿಯಾಬಾದ್ ಬಳಿ ನಡೆದಿದೆ.ಹೊಸಮಲಿಯಾಬಾದ್ ಗ್ರಾಮದ ತಿಮ್ಮಪ್ಪ (32) ಕೊಲೆಯಾದ ವ್ಯಕ್ತಿ. ಹಮಾಲಿ ಕೆಲಸ ಮಾಡಿಕೊಂಡಿದ್ದ ತಿಮ್ಮಪ್ಪ ರಾಯಚೂರಿನಿಂದ ಮಲಿಯಾಬಾದ್‌ಗೆ ತೆರಳುವ ರಸ್ತೆ ಮಧ್ಯೆದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ರಾತ್ರಿ ಸ್ನೇಹಿತರ (Friends) ಜೊತೆ ಹೊರಗಡೆ ಹೋದವನು ಬೆಳಗ್ಗೆ ಹೆಣವಾಗಿ ಪತ್ತೆಯಾಗಿದ್ದಾನೆ. ಕೊಲೆ ಮಾಡಿದವರೇ ಮೃತ ದೇಹವನ್ನು ರಸ್ತೆಯಲ್ಲಿ ಬೀಸಾಡಿ ಹೋಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆದರೆ ಮೃತನ ಮೈಮೇಲೆ ಯಾವುದೇ ಹಲ್ಲೆ, ಗಾಯದ ಗುರುತುಗಳು ಕಂಡುಬಂದಿಲ್ಲ. ಇದನ್ನೂ ಓದಿ: ಸಿದ್ರಾಮುಲ್ಲಾ ಖಾನ್ ಸಿಎಂ ಆದ್ರೆ ಹಿಂದೂಗಳ ಹತ್ಯೆ ಆಗುತ್ತೆ: ಸಿ.ಟಿ ರವಿಘಟನೆಗೆ ಸಂಬಂಧಿಸಿ ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಕೊಲೆ ಆರೋಪಿಗಳ ಪತ್ತೆಗೆ ಪೊಲೀಸರ ವಿಶೇಷ ತಂಡ ರಚಿಸಲಾಗಿದ್ದು, ತನಿಖೆ ನಡೆದಿದೆ. ಇದನ್ನೂ ಓದಿ: 2023ಕ್ಕೆ 15 ವರ್ಷ ಪೂರೈಸಿದ ವಾಹನಗಳು ಗುಜರಿಗೆ: ನಿತಿನ್ ಗಡ್ಕರಿ
Sign in to your account
Username or Email Address


Password

 Remember Me


