ರಾಮನಗರ: ನಗರಸಭಾ ಕಾಂಗ್ರೆಸ್ (Congress) ಸದಸ್ಯರ ನಂಗನಾಚ್ ಕಾರ್ಯಕ್ರಮದ ವೇಳೆ ಯುವಕನಿಗೆ ಚಾಕು ಇರಿದಿರುವಂತಹ ಘಟನೆ ರಾಮನಗರದಲ್ಲಿ  (Ramanagara) ತಡವಾಗಿ ಬೆಳಕಿಗೆ ಬಂದಿದೆ.ಪಟ್ಟಣದ ಯಾರಬ್ ನಗರದ ಕಲ್ಯಾಣ ಮಂಟಪದಲ್ಲಿ ನವೆಂಬರ್ 24ರ ರಾತ್ರಿ ಘಟನೆ ನಗರಸಭೆ ಕಾಂಗ್ರೆಸ್ ಸದಸ್ಯ ದೌಲತ್ ಷರೀಫ್ ಹುಟ್ಟುಹಬ್ಬದ ಅಂಗವಾಗಿ ನಂಗಾನಾಚ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ಡ್ಯಾನ್ಸರ್‌ಗಳ ಜೊತೆ ಅಸಭ್ಯವಾಗಿ ವರ್ತಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಮೆಹಬೂಬ್ ನಗರದ ನಿವಾಸಿ ಮುಫಾ ಮೇಲೆ ಅದೇ ನಗರದ ನಿವಾಸಿ ರುಮಾನ್ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬರುತ್ತೆ.. ಧೈರ್ಯವಿದ್ರೆ ನಿಲ್ಲಿಸಿ – ದೀದಿಗೆ ಬಿಜೆಪಿ ಸವಾಲುಗಾಯಾಳು ಮುಫಾಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿ ರುಮಾನ್‍ನ್ನು ರಾಮನಗರ ಟೌನ್ ಪೊಲೀಸರು ಬಂಧಿಸಿದ್ದಾರೆ. ನಗರಸಭೆ 19ನೇ ವಾರ್ಡ್ ಸದಸ್ಯ ದೌಲತ್ ಷರೀಫ್ ತಮ್ಮ ಬರ್ತ್‍ಡೇ ಆಚರಣೆಗೆ ಬೆಂಗಳೂರಿನಿಂದ ಡ್ಯಾನ್ಸರ್‌ಗಳನ್ನು ಕರೆಸಿ ಅವರು ಅರೆಬೆತ್ತಲೆಯಾಗಿ ಕುಣಿಯುವಾಗ ನೋಟುಗಳ ಸುರಿಮಳೆ ಗೈದು ಮೋಜುಮಸ್ತಿ ಮಾಡಿದ್ದು ಇದಕ್ಕೆ ಸಾರ್ವಜನಿಕರಿಂದ ಸಾಕಷ್ಟು ಟೀಕೆ ಕೂಡ ವ್ಯಕ್ತವಾಗಿತ್ತು. ಇದನ್ನೂ ಓದಿ: ಮೋದಿ ಸರ್ಕಾರದಲ್ಲಿ ಗೌಪ್ಯತೆ ಉಲ್ಲಂಘಿಸಲು ಸಾಧ್ಯವಿಲ್ಲ – ಡೇಟಾ ಸುರಕ್ಷತೆ ಬಗ್ಗೆ ರಾಜೀವ್ ಸ್ಪಷ್ಟನೆ
Sign in to your account
Username or Email Address


Password

 Remember Me


