ಕಲಬುರಗಿ: ನಿನ್ನೆ ಮದುವೆ (Marriage) ಆಗ್ತೇನೆ, ಎಂಗೇಜ್ಮೆಂಟ್ ಕ್ಯಾನ್ಸಲ್ ಮಾಡಿಕೊಂಡು ಬಾ ಎಂದು ಕಾಡ್ತಿದ್ದ ಯುವತಿ ಕಾಟಕ್ಕೆ ಬೇಸತ್ತು ಅಪ್ಪ-ಅಮ್ಮನನ್ನು ಬಿಟ್ಟು ಓಡಿಹೋಗಿರುವ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಹರವಾಳ ಗ್ರಾಮದಲ್ಲಿ ನಡೆದಿದೆ.ಕಲಬುರಗಿ ಜಿಲ್ಲೆಯ ಹರವಾಳ ಗ್ರಾಮದ ಮರೆಪ್ಪಾ ಮನೆಯಿಂದ ನಾಪತ್ತೆಯಾದ ಯುವಕ. ಇದನ್ನೂ ಓದಿ: ಶ್ರದ್ಧಾಳನ್ನ ಕೊಂದು ಗೆಳತಿಯೊಂದಿಗೆ ಸೆಕ್ಸ್- ಡಾಕ್ಟರ್ ಜೊತೆ ಡೇಟಿಂಗ್ ಮಾಡ್ತಿದ್ದ ಅಫ್ತಾಬ್ಹೆಣ್ಣು ನೋಡೊಕೆ ಹೋದಾಗ ಹುಡುಗ ಇಷ್ಟವಿಲ್ಲ ಎಂದು ಮರೆಪ್ಪನನ್ನು ತಿರಸ್ಕರಿಸಿದ್ದ ಯುವತಿ ಮತ್ತೊಂದು ಹುಡುಗಿಯನ್ನ ನೋಡಿ ಎಂಗೆಜ್ಮೆಂಟ್ ಆದ್ಮೇಲೆ ಕಾಟ ಕೊಡಲು ಶುರು ಮಾಡಿದ್ದಾಳೆ. ನಿನ್ನೇ ಮದುವೆ ಆಗ್ತೇನೆ, ನಿನ್ನ ಎಂಗೇಜ್ಮೆಂಟ್ ಕ್ಯಾನ್ಸಲ್ ಮಾಡಿಕೊಂಡು ಬಾ ಎಂದು ಯುವತಿ ನಿರಂತರವಾಗಿ ಕಾಡಲು ಶುರು ಮಾಡಿದ್ದಾಳೆ. ಯುವತಿಯ ಕಾಟಕ್ಕೆ ಬೇಸತ್ತು ಮರೆಪ್ಪ ಮನೆ ಬಿಟ್ಟೇ ಹೋಗಿದ್ದಾನೆ. ಇದನ್ನೂ ಓದಿ: ಶ್ರದ್ಧಾಳನ್ನ ಕೊಂದು ಗೆಳತಿಯೊಂದಿಗೆ ಸೆಕ್ಸ್- ಡಾಕ್ಟರ್ ಜೊತೆ ಡೇಟಿಂಗ್ ಮಾಡ್ತಿದ್ದ ಅಫ್ತಾಬ್ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಹರವಾಳ ಗ್ರಾಮದ ಮರೆಪ್ಪ ಬೀದರ್ (Bidar) ಜಿಲ್ಲಾ ಪಂಚಾಯ್ತಿಯಲ್ಲಿ ನರೇಗಾ ಸಂಯೋಜಕನಾಗಿ ಕೆಲಸ ಮಾಡ್ತಿದ್ದ. ಸ್ನೇಹಿತರ ಜೊತೆ ಸೇರಿಕೊಂಡು ಬೀದರ್ ನಲ್ಲೆ ಹುಡುಗಿ ನೋಡಿದ್ದ. ಆ ಯುವತಿ ಹುಡುಗ ಸರಿ ಇಲ್ಲ ಅಂತಾ ತಿರಸ್ಕರಿಸಿದ್ದಳು. ನಂತರ ಮರೆಪ್ಪ ಮತ್ತೊಂದು ಹುಡುಗಿಯನ್ನು ನೋಡಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದ.ಈ ಮಧ್ಯೆ ಹಳೆ ಹುಡುಗಿ ಸಿಕ್ಕು ಇಬ್ಬರ ಮಧ್ಯೆ ಸ್ನೇಹ ಬೇಳೆದಿತ್ತು. ಇಬ್ಬರು ಫೋನ್‌ನಂಬರ್ ಬದಲಾಯಿಸಿಕೊಂಡು ಫೋನ್, ಮೆಸೇಜ್ ಮಾಡುತ್ತಿದ್ದರು. ಆದರೆ, ಕೆಲ ದಿನಗಳ ಬಳಿಕ ನಿಶ್ಚಿತಾರ್ಥ ವಿಷಯ ತಿಳಿದು ರಿಜೆಕ್ಟ್ ಮಾಡಿದ್ದ ಯುವತಿ ಮತ್ತೆ ಮದುವೆಯಾಗುವಂತೆ ಒತ್ತಾಯ ಮಾಡಿದ್ದಳು. ಯವತಿಯ ಕಾಟಕ್ಕೆ ಬೇಸತ್ತ ಯುವಕ ನವೆಂಬರ್ 13 ರಂದು ಮನೆ ಬಿಟ್ಟು ತೆರಳಿದ್ದಾನೆ.ಐದು ಪುಟಗಳ ಪತ್ರ ಬರೆದು, ಮೊಬೈಲ್ ಫೋನ್ (Mobile Phone) ಮನೆಯಲ್ಲೇ ಬಿಟ್ಟು ನಾಪತ್ತೆಯಾಗಿದ್ದಾನೆ. ಇತ್ತ ವೃದ್ಧ ತಂದೆ ತಾಯಿ ಬಿಟ್ಟು ಹೋದ ಮಗನಿಗಾಗಿ ಕಣ್ಣಿರು ಹಾಕುತ್ತಾ ಕಾಯುತ್ತಿದ್ದಾರೆ. ನೆಲೋಗಿ ಪೊಲೀಸ್ ಠಾಣೆಯಲ್ಲಿ (Police Station) ಪ್ರಕರಣ ದಾಖಲಾಗಿದೆ.
Sign in to your account
Username or Email Address


Password

 Remember Me


