ಶಿವಮೊಗ್ಗ: ಜನವರಿ ಕೊನೆಯ ವಾರ ಅಥವಾ ಫೆಬ್ರವರಿ ಮೊದಲನೇ ವಾರದಲ್ಲಿ ಶಿವಮೊಗ್ಗ (Shivamogga) ವಿಮಾನ ನಿಲ್ದಾಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಉದ್ಘಾಟಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ (B S Yediyurappa) ತಿಳಿಸಿದರು.ಶಿವಮೊಗ್ಗದ ಸೋಗಾನೆ ಸಮೀಪ ನಿರ್ಮಾಣ ಆಗುತ್ತಿರುವ ವಿಮಾನ ನಿಲ್ದಾಣ (Airport) ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ವಿಮಾನ ನಿಲ್ದಾಣದ ರನ್ ವೇ ಕಾಮಗಾರಿ 3,110 ಅಡಿ ಉದ್ದವಿದ್ದು, ಅದರ ಅಗಲ 45 ಮೀ. ಇದೆ. ಇದು ರಾಜ್ಯದಲ್ಲೇ ಎರಡನೇ ಅತಿ ಉದ್ದದ ರನ್ ವೇ ಆಗಿದೆ ಎಂದು ಹೇಳಿದರು. ಇದನ್ನೂ ಓದಿ: ಮೈಸೂರಿನಲ್ಲಿ ಬೇಕಾಬಿಟ್ಟಿ ಮನೆ ಬಾಡಿಗೆ ಕೊಡುವಂತಿಲ್ಲ – ಪೊಲೀಸ್ ಕ್ಲಿಯರೆನ್ಸ್ ಕಡ್ಡಾಯಅತಿ ಕಡಿಮೆ ಅವಧಿಯಲ್ಲಿ ಬಹಳ ವೇಗವಾಗಿ ವಿಮಾನ ನಿಲ್ದಾಣ ಕಾಮಗಾರಿ ನಡೆದಿದೆ. ವಿಮಾನ ನಿಲ್ದಾಣ ಕಾಮಗಾರಿಗೆ ಭೂಮಿ ನೀಡಿದ ರೈತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ವಿಮಾನ ಹಾರಾಟ ಆರಂಭದ ನಂತರ ಪ್ರವಾಸೋದ್ಯಮ ಹಾಗೂ ವಾಣಿಜ್ಯ ವ್ಯಾಪಾರಕ್ಕೂ ಅನುಕೂಲ ಆಗಲಿದೆ ಎಂದರು. ಇದನ್ನೂ ಓದಿ:  GPS ಟ್ರ್ಯಾಕರ್ ಬಳಸಿ ಉದ್ಯಮಿಯಿಂದ 50 ಲಕ್ಷ ದರೋಡೆ ಮಾಡಿದ್ದ ಖತರ್ನಾಕ್ ಕಳ್ಳರ ಬಂಧನ
Sign in to your account
Username or Email Address


Password

 Remember Me


