ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳೆಂದರೆ (Government Hospital) ಮೂಗುಮುರಿಯೋ ಜನರೇ ಜಾಸ್ತಿ. ಆಸ್ಪತ್ರೆ ಕ್ಲೀನ್ ಇರಲ್ಲ, ನರ್ಸ್‌ಗಳ ದರ್ಪ ಜೋರಾಗಿರುತ್ತೆ ಅಂತ ನೂರೆಂಟು ಕಂಪ್ಲೆಂಟ್. ಆದರೆ ಬೆಂಗಳೂರಿನ ಈ ಸರ್ಕಾರಿ ಆಸ್ಪತ್ರೆ ಇದೆಲ್ಲದಕ್ಕೂ ಸೆಡ್ಡು ಹೊಡೆದು, ಆಸ್ಪತ್ರೆಗಳೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ (Gandhi Hospital Bangalore) ರೋಬೊ ಟ್ರೀಟ್ಮೆಂಟ್:
ಟೆಕ್ನಾಲಜಿ ಬೆಳೆದಂತೆ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳು ಆಗ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಂತೂ ದಿನನಿತ್ಯ ಲೇಟೆಸ್ಟ್ ಟೆಕ್ನಾಲಜಿ ಪರಿಚಯ ಆಗ್ತಿದೆ. ಆದರೆ ಸರ್ಕಾರಿ ಆಸ್ಪತ್ರೆಗಳು ಮಾತ್ರ ಆದ್ಯಾವಾಗ ಈ ಎಲ್ಲಾ ಸೌಲಭ್ಯಗಳನ್ನ ತಂದು ಬಡವರ ಕಷ್ಟಕ್ಕೆ ಆಗುತ್ತವೆ ಅನ್ನೋ ಕೊರಗು ಸಾಮಾನ್ಯರಿಗೆ ಕಾಡುತ್ತಿತ್ತು. ಈ ನಿಟ್ಟಿನಲ್ಲಿ ವೈದ್ಯಕೀಯ ವಲಯದಲ್ಲಿರುವ ಕಾಂಪಿಟೇಶನ್ ತಕ್ಕಂತೆ ಇದೀಗ ಆರೋಗ್ಯ ಇಲಾಖೆ ಕೂಡ ಹೆಜ್ಜೆ ಹಾಕಲು ಪ್ರಯತ್ನಿಸಿದೆ. ಇದರ ಭಾಗವಾಗಿ ಇದೇ ಮೊದಲ ಬಾರಿಗೆ ಬೆಂಗಳೂರು ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ (Gandhi Hospital) ಮೊದಲ ಬಾರಿಗೆ ರೋಬೋಟಿಕ್ ಟೆಕ್ನಾಲಜಿ ಪರಿಚಯ ಮಾಡಿದೆ. ಇದನ್ನೂ ಓದಿ: `ಗಾಲ್ವಾನ್ ಸೇಸ್ ಹಾಯ್’ – ರಿಚಾ ಚಡ್ಡಾ ಬೆಂಬಲಿಸಿದ ನಟ ಪ್ರಕಾಶ್ ರಾಜ್ಏನೇನು ಅನುಕೂಲ?:
ಹೌದು. ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆ ಈ ಟೆಕ್ನಾಲಜಿ ಬಳಕೆ ಮಾಡುತ್ತಿರುವ ಮೊದಲ ಸರ್ಕಾರಿ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆಸ್ಪತ್ರೆಯ ಐಸಿಯು (ICU) ನಲ್ಲಿ ಈ ಟೆಕ್ನಾಲಜಿ ಬಳಕೆ ಮಾಡಲಾಗುತ್ತಿದ್ದು, ಒಂದೇ ರೂಮಿನಲ್ಲಿ ಕುಳಿತು ಹಿರಿಯ ವೈದ್ಯರು ರೋಗಿಗೆ ಸಂಬಂಧಿಸಿದ ಚಿಕಿತ್ಸೆ ನೀಡಬಹುದಾಗಿದೆ. ಜೊತೆಗೆ ಒಂದೇ ರೂಂನಲ್ಲಿ ಕುಳಿತು ಇಡೀ ಐಸಿಯುನಲ್ಲಿರುವ ರೋಗಿಗಳ ಸ್ಥಿತಿಗತಿಗಳನ್ನ ತಿಳಿಯಬಹುದಾಗಿದೆ. ಅಲ್ಲದೇ ಕೆಲವೊಮ್ಮೆ ಇತರರಿಂದ ಐಸಿಯುನಲ್ಲಿರುವ ರೋಗಿಗಳು ಇನ್ಪೆಕ್ಷನ್ ಗೆ ತುತ್ತಾಗುವ ಸಾಧ್ಯತೆಯನ್ನ ತಪ್ಪಿಸಬಹುದಾಗಿದ್ದು, ಇತರ ಎಕ್ಸ್ ಪರ್ಟ್ ವೈದ್ಯರಿಂದ ಕುಳಿತಲ್ಲೇ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ ಎಂದು ರಾಜೀವ್ ಗಾಂಧಿ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್. ನಾಗರಾಜ ಮಾಹಿತಿ ನಿಡಿದ್ದಾರೆ. ಇದನ್ನೂ ಓದಿ: ಹಿಂದಿ ಹೇರಿಕೆ ವಿರೋಧಿಸಿ ಬೆಂಕಿ ಹಚ್ಚಿಕೊಂಡು ತಮಿಳುನಾಡು ರೈತ ಸಾವುವಿಶೇಷತೆಗಳೇನು?
ಇನ್ಫೆಕ್ಷನ್ ರೇಟ್ ಕಡಿಮೆಯಾಗಲಿದೆ, ವೈದ್ಯರಿಗೆ ಶಸ್ತ್ರಚಿಕಿತ್ಸೆ ವೇಳೆ ವೇಳೆ ರೋಬೋಟೆಕ್ ಟೆಕ್ನಾಲಜಿ ತುಂಬಾ ನೆರವಾಗಲಿದೆ. ಬಹುಬೇಗ ಸರ್ಜರಿ ಮಾಡಲು ರೋಬೊಟೆಕ್ ಟೆಕ್ನಾಲಜಿ, ಸಹಾಯಕಾರಿಯಾಗಲಿದೆ. ತುರ್ತು ಚಿಕಿತ್ಸೆ ವೇಳೆ ಹೆಚ್ಚಿನ ಅನುಕೂಲ. ರೋಗಿಯ ಸ್ಥಿತಿಗತಿ ಬಗ್ಗೆ ರೋಬೊ ಥಟ್ಟಂತ ಮಾಹಿತಿ ಕೊಡುತ್ತೆ. ನೇರ ಸಂಪರ್ಕ ಇಲ್ಲದೆ ರೋಗಿಯ ಜೊತೆ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆಯಲು ಸಾಧ್ಯವಾಗಿದೆ.ಮೊದಲ ಹಂತದಲ್ಲಿ ಒಟ್ಟು 28 ಬೆಡ್‌ಗಳಿಗೆ ರೋಬೋಟೆಕ್ ಡಾಕ್ಟರ್ ವ್ಯವಸ್ಥೆ ಮಾಡಲಾಗಿದೆ. ಇನ್ನೊಂದು ವಾರದೊಳಗೆ ಈ ಸೇವೆ ಉದ್ಘಾಟನೆಯಾಗಲಿದ್ದು, ಬಳಿಕ ಸಾರ್ವಜನಿಕರ ಸೇವೆಗೆ ಮುಕ್ತವಾಗಲಿದೆ ಎಂದು ಡಾ.ಸಿ.ಎನ್ ನಾಗರಾಜ್ ತಿಳಿಸಿದ್ದಾರೆ.
Sign in to your account
Username or Email Address


Password

 Remember Me


