ಚಿಕ್ಕಮಗಳೂರು: ಶಾಲಾ ಮಕ್ಕಳ (Student) ಜೊತೆ ಅಸಭ್ಯ ವರ್ತನೆ ತೋರಿದ ಕ್ಯಾಬ್ ಚಾಲಕನಿಗೆ (Cab Driver) ಸ್ಥಳೀಯರು ಕಂಬಕ್ಕೆ ಕಟ್ಟಿ ಧರ್ಮದೇಟು ನೀಡಿರುವ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದ ಸಿದ್ದರಹಳ್ಳಿ ಗ್ರಾಮದಲ್ಲಿ ನಡೆದಿದೆ.ಕಡೂರು ತಾಲೂಕಿನ ರಾಜಪ್ಪ ಎಂಬವರು ಕಡೂರಿನಿಂದ ಶಿಕ್ಷಕರನ್ನು ತನ್ನ ವ್ಯಾನಿನಲ್ಲಿ ಸಿದ್ದರಹಳ್ಳಿಗೆ ಕರೆದುಕೊಂಡು ಬಂದು ಸಂಜೆ ಮತ್ತೆ ಕರೆದೊಯ್ಯುತ್ತಿದ್ದರು. ಹೀಗೆ ಬೆಳಗ್ಗೆಯಿಂದ ಸಂಜೆವರೆಗೂ ಶಾಲೆ (School) ಬಳಿಯೇ ಇರುತ್ತಿದ್ದ ರಾಜಪ್ಪ ಅಲ್ಲಿನ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದರು. ಶಾಲೆಯೊಳಗೆ, ಬಾತ್ ರೂಮಿನಲ್ಲಿ ಮಕ್ಕಳ ಜೊತೆ ಕೆಟ್ಟದಾಗಿ ವರ್ತಿಸುತ್ತಿದ್ದರು. ಈ ಬಗ್ಗೆ ವಿದ್ಯಾರ್ಥಿನಿ ಶಾಲೆಯ ಶಿಕ್ಷಕರ ಬಳಿ ಹೇಳಿದ್ದಾರೆ.ಆಗ ಅವರು ನಿಮ್ಮ ತಂದೆ- ತಾಯಿಗೆ ತಿಳಿಸುವಂತೆ ಹೇಳಿದ್ದರು. ಮಕ್ಕಳು ಹೆತ್ತವರಿಗೆ ಹೇಳಿದ ಬಳಿಕ ಪೋಷಕರು ಎಸ್.ಡಿ.ಎಂ.ಸಿ. ಅಧ್ಯಕ್ಷರ ಗಮನಕ್ಕೆ ತಂದಿದ್ದಾರೆ. ಶಾಲಾ ಆಡಳಿತ ಮಂಡಳಿ ಕ್ಯಾಬ್ ಚಾಲಕ ರಾಜಪ್ಪನನ್ನು ಕರೆಸಿ ಕೇಳಿದಾಗ ಆರೋಪಿ ರಾಜಪ್ಪ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಕೂಡಲೇ ರೊಚ್ಚಿಗೆದ್ದ ಸ್ಥಳೀಯರು ರಾಜಪ್ಪನನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ. ಕಂಬಕ್ಕೆ ಕಟ್ಟಿ ಬಾರಿಸಿದ್ದಾರೆ. ನೊಂದವರು ಈ ಬಗ್ಗೆ ದೂರು ನೀಡಿದ್ದು, ಪೊಲೀಸರು ರಾಜಪ್ಪನನ್ನು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿ ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Sign in to your account
Username or Email Address


Password

 Remember Me


