ರಾಮನಗರ: ಮಾಗಡಿ (Magadi) ಪಟ್ಟಣದ ಕೆಎಸ್‍ಆರ್‌ಟಿಸಿ ಬಸ್ (KSRTC Bus)ನಿಲ್ದಾಣದ ಆವರಣದಲ್ಲಿರುವ ಬಸವೇಶ್ವರ ಹಾಗೂ ಉಮಾ ಮಹೇಶ್ವರಿ ದೇಗುಲದಲ್ಲಿನ ಶಿವಲಿಂಗ ಕಣ್ಣು ತೆರೆದಿದೆ ಎಂಬ ವದಂತಿ ಹಬ್ಬಿದ ಹಿನ್ನೆಲೆ ದೇಗುಲಕ್ಕೆ ಭಕ್ತರ ದಂಡೇ ಹರಿದುಬಂದಿದೆ.ಭಕ್ತರ ನಿಯಂತ್ರಣಕ್ಕೆ ಪೊಲೀಸರು ಹರಸಾಹಸಪಟ್ಟಿದ್ದಾರೆ. ಹೂವಿನಿಂದ ಅಲಂಕೃತಗೊಂಡಿದ್ದ ಲಿಂಗ ಆಕಾರದ ಮೂರ್ತಿಯ ಮೇಲ್ಭಾಗದಲ್ಲಿ ಕಣ್ಣುಗಳ ಆಕೃತಿ ಕಾಣಿಸಿಕೊಂಡಿದೆ. ಇದರಿಂದ ದೇವರೇ ಕಣ್ಣು ಬಿಟ್ಟಿದ್ದಾನೆಂದು ಭಾವಿಸಿದ ಭಕ್ತರು ಶಿವಲಿಂಗ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.  ಇದನ್ನೂ ಓದಿ: ಮಂಡ್ಯದಲ್ಲಿ ಕಮಲ ಅರಳಿಸಲು ಪ್ಲಾನ್ – ಸುಮಲತಾ ಅಂಬರೀಶ್ ಆಪ್ತ ಸಚ್ಚಿದಾನಂದ ಬಿಜೆಪಿಗೆಇದನ್ನು ಕಾಣಲು ಸುತ್ತಮುತ್ತಲಿನ ನೂರಾರು ಜನರು ದೇವಾಲಯಕ್ಕೆ ಬಂದಿದ್ದು, ಕ್ರಮೇಣ ನೂಕುನುಗ್ಗಲು ಉಂಟಾಗಿದೆ. ಕೆಲಕಾಲದ ಬಳಿಕ ಕಣ್ಣಿನ ಆಕೃತಿ ಅದೃಶ್ಯವಾಗಿದ್ದು ಭಕ್ತರನ್ನು ಅಚ್ಚರಿಗೊಳಿಸಿದೆ. ಇದನ್ನೂ ಓದಿ: ಶ್ರದ್ಧಾವಾಕರ್ ಹತ್ಯೆ ಪ್ರಕರಣ – ಪಾಲಿಗ್ರಾಫ್ ಪರೀಕ್ಷೆ ವೇಳೆ ಅಫ್ತಾಬ್‍ಗೆ ಕೇಳಿದ ಪ್ರಶ್ನೆಗಳೇನು?
Sign in to your account
Username or Email Address


Password

 Remember Me


