ಚಿಕ್ಕಬಳ್ಳಾಪುರ: ಕಳೆದ ಬಾರಿಯ ಉಪಚುನಾವಣೆ (By Election) ವೇಳೆ ಕಾಂಗ್ರೆಸ್ (Congress) ಬಿಟ್ಟು ಬಿಜೆಪಿಗೆ (BJP) ಬಂದಿದ್ದಕ್ಕೆ ಜನ ನನ್ನನ್ನು ಸೋಲಿಸಿಬಿಟ್ಟರು ಎಂದು ಪೌರಾಡಳಿತ ಇಲಾಖೆ ಸಚಿವ ಎಂಟಿಬಿ ನಾಗರಾಜ್ (MTB Nagaraj) ತಮ್ಮ ಸೋಲಿನ ಕಹಿ ನೆನಪನ್ನು ಮಾಡಿಕೊಂಡಿದ್ದಾರೆ.ಚಿಕ್ಕಬಳ್ಳಾಪುರದ (Chikkaballapura) ಜರಬಂಡಹಳ್ಳಿ (Jarabandahalli) ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವ ಶಾಸಕರು, ಸಚಿವರು ಸರ್ಕಾರ ಕೆಲಸ ಮಾಡಿದೆ ಅಂತ ಜನರೇ ನೆನೆಪಿಟ್ಟುಕೊಳ್ಳಿ. ಯಾಕೆಂದರೆ ಚುನಾವಣೆ ಬಂದ ನಾಲ್ಕೈದು ದಿನದಲ್ಲೇ ಮೆರೆತು ಬಿಡುತ್ತೀರಾ. ನಿದ್ದೆ ಮಂಪರು ಬಂದ ಹಾಗೆ ತೂಕಡಿಸಿಬಿಡುತ್ತೀರಾ. ಮೊನ್ನೆ ನಡೆದ ಬೈ ಎಲೆಕ್ಷನ್‍ನಲ್ಲಿ ನಾನು ಸೋಲಬೇಕಿತ್ತಾ? ಆದರೆ ಸೋಲಿಸಿಬಿಟ್ಟಿದ್ದೀರಾ ಎಂದಿದ್ದಾರೆ. ಇದನ್ನೂ ಓದಿ: ಶಿವಲಿಂಗದ ಮೇಲೆ ಮೂಡಿದ ಕಣ್ಣಿನ ಆಕೃತಿ – ವಿಸ್ಮಯ ನೋಡಲು ಮುಗಿಬಿದ್ದ ಜನಈ ವಿಚಾರದಲ್ಲಿ ನನ್ನದು ಒಂದು ತಪ್ಪಿದೆ. ಸುಧಾಕರ್ ಜೊತೆಗೆ ನಾನು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದನಲ್ಲ ಅದಕ್ಕೆ ಸೋಲಿಸಿಬಿಟ್ಟಿದ್ದೀರಾ. ಆದರೆ ಸುಧಾಕರ್‌ನನ್ನು ಗೆಲ್ಲಿಸಿದ್ದೀರಾ. ಇದೇ ನನಗೆ ನೋವು ತರಿಸಿದೆ. ಸೋಲಿನಿಂದ ನನಗೆ ಏನೂ ಕಷ್ಟವಾಗಲಿಲ್ಲ. ಆದರೆ ಹೊಸಕೋಟೆ ತಾಲೂಕಿನ ಅಭಿವೃದ್ಧಿಗೆ ಹಿನ್ನೆಡೆ ಆಯಿತು. ಹೊಸಕೋಟೆ ಜನರ ಸೇವೆ ಮಾಡಲು ಆಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ವೈಷ್ಣವಿ ಹಾಗೂ ವಿದ್ಯಾಭರಣ್ ಪರಿಚಯವಾಗಿದ್ದು 2017ರಲ್ಲಿ: ಚಾಕೋಲೇಟ್ ಬಾಯ್ ಸ್ಟೋರಿ
Sign in to your account
Username or Email Address


Password

 Remember Me


