ಕಿರುತೆರೆಯ ಸಾಕಷ್ಟು ಧಾರಾವಾಹಿ ಮೂಲಕ ಗುರುತಿಸಿಕೊಂಡಿರುವ ಸ್ವಾತಿ ಹೆಚ್ ವಿ(Swathi Hv) ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೈಸೂರಿನಲ್ಲಿ ನಾಗಾರ್ಜುನ ರವಿ(Nagarjuna Ravi) ಜೊತೆ ನಟಿ ಹಸೆಮಣೆ ಏರಿದ್ದಾರೆ.ಶುಭವಿವಾಹ, ಪುಟ್ಟಗೌರಿ ಮದುವೆ, ಗಂಗಾ, ರಂಗನಾಯಕಿ ಸೀರಿಯಲ್‌ಗಳ ಮೂಲಕ ಮೋಡಿ ಮಾಡಿರುವ ನಟಿ ಸ್ವಾತಿ ದಾಂಪತ್ಯ ಬದುಕಿಗೆ ಹೆಜ್ಜೆ ಇಟ್ಟಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ ಸ್ವಾತಿ ಮತ್ತು ನಾಗಾರ್ಜುನ ರವಿ ಮದುವೆ ನಡೆದಿದೆ. ಈ ಸಂಭ್ರಮದಲ್ಲಿ ಶಿಲ್ಪಾ ಶೆಟ್ಟಿ, ನಂದಿನಿ, ಅನಿಕಾ ಸಿಂಧ್ಯ, ಅಭಿಷೇಕ್ ದಾಸ್ ಹೀಗೆ ಸಾಕಷ್ಟು ಕಲಾವಿದರು ಭಾಗಿಯಾಗಿದ್ದಾರೆ. ಇದನ್ನೂ ಓದಿ: ಬಾಲಯ್ಯ ಅಭಿನಯದ ‘ವೀರ ಸಿಂಹ ರೆಡ್ಡಿ’ ಚಿತ್ರದ ಮೊದಲ ಸಾಂಗ್ ರಿಲೀಸ್ಡಿಪ್ಲೋಮಾ ಇನ್ ಜ್ಯುವೆಲ್ಲರಿ ಡಿಸೈನ್ ಮಾಡುತ್ತ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನಟಿ ಅನಿರೀಕ್ಷಿತವಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ದಂಡುಪಾಳ್ಯ, ಬಿಡಲಾರೆ ನಿನ್ನ, ವಾರಸ್ಧಾರ, ಉಡ, ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಿರುತೆರೆಯಲ್ಲೂ ಆಕ್ಟೀವ್ ಆಗಿದ್ದಾರೆ. ಸದ್ಯ ಹೊಸ ಬಾಳಿಗೆ ಕಾಲಿಟ್ಟಿರುವ ಈ ಜೋಡಿಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ.
Sign in to your account
Username or Email Address


Password

 Remember Me


