ಬೆಳಗಾವಿ: ಕಳ್ಳನೇ ತಿರುಗಿ ಬೊಬ್ಬೆ ಹೊಡೆದ ರೀತಿಯಲ್ಲಿ ಬೊಮ್ಮಾಯಿ ಬೊಬ್ಬೆ ಹೊಡೆದುಕೊಳ್ಳುತ್ತಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ವಿರುದ್ಧ ಕೊಲ್ಲಾಪುರ ಶಿವಸೇನೆ ಉದ್ಧವ್ ಠಾಕ್ರೆ ಬಣದ ಜಿಲ್ಲಾಧ್ಯಕ್ಷ ವಿಜಯ ದೇವಣೆ (Vijay Devane) ನಾಲಿಗೆ ಹರಿಬಿಟ್ಟಿದ್ದಾರೆ.ಕೊಲ್ಲಾಪುರ ನಗರದಲ್ಲಿ ಕರ್ನಾಟಕ ಬಸ್‍ಗಳಿಗೆ ಮಸಿ ಬಳಿದ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕ (Karnataka) ಸಿಎಂ ಬೊಮ್ಮಾಯಿ ಜತ್ತ, ಅಕ್ಕಲಕೋಟ, ಸೊಲ್ಲಾಪುರ ಕರ್ನಾಟಕ ವ್ಯಾಪ್ತಿಯ ಪ್ರದೇಶ ಅಂತಾರೆ. ಕಳ್ಳನೇ ತಿರುಗಿ ಬೊಬ್ಬೆ ಹೊಡೆದ ರೀತಿಯಲ್ಲಿ ಬೊಮ್ಮಾಯಿ ಬೊಬ್ಬೆ ಹೊಡೆದುಕೊಳ್ಳುತ್ತಿದ್ದಾರೆ. ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್ ಮಹಾರಾಷ್ಟ್ರಕ್ಕೆ (Maharashtra) ಸೇರಬೇಕೆಂದು ಚಳವಳಿ ನಡೆಯುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಿಂದ ಬೆಳಗಾವಿಗೆ ಬರುತ್ತಿದ್ದ 300ಕ್ಕೂ ಹೆಚ್ಚು ಬಸ್‌ಗಳು ತಾತ್ಕಾಲಿಕ ಸ್ಥಗಿತಕಳೆದ 50 ರಿಂದ 60 ವರ್ಷಗಳಿಂದ ಚಳವಳಿ ನಡೆಯುತ್ತಿದೆ. ಈ ಚಳವಳಿ ಹತ್ತಿಕ್ಕಲು ಬೊಮ್ಮಾಯಿ ನೋಡುತ್ತಿದ್ದಾರೆ. ಕರ್ನಾಟಕಕ್ಕೆ ಮಹಾರಾಷ್ಟ್ರ ಸಾರಿಗೆ ಬಸ್‍ಗಳ ಪ್ರವೇಶ ನಿರ್ಬಂಧಿಸಲಾಗಿದೆ. ಇದನ್ನೆಲ್ಲ ನೋಡಿದ್ರೆ ಮರಾಠಿಗರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಬೊಮ್ಮಾಯಿ ನಡೆ ಮಹಾರಾಷ್ಟ್ರ ಅಷ್ಟೇ ಅಲ್ಲ ಇಡೀ ದೇಶಕ್ಕೆ ಗೊತ್ತಾಗಬೇಕೇಂದು ಶವಯಾತ್ರೆ ಮಾಡಿದ್ದೇವೆ ಎಂದು ವಿಜಯ್ ದೇವಣೆ ನಾಲಿಗೆ ಹರಿಬಿಟ್ಟಿದ್ದಾರೆ. ಇದನ್ನೂ ಓದಿ: ಶಬರಿಮಲೆಗೆ ತೆರಳಿದ್ದ ಮಿನಿ ಬಸ್‍ಗೆ ಲಾರಿ ಡಿಕ್ಕಿ – 23 ಭಕ್ತರಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ
Sign in to your account
Username or Email Address


Password

 Remember Me


