ರಾಮನಗರ: ಶಬರಿಮಲೆಗೆ (Sabarimala) ತೆರಳಿದ್ದ ಅಯ್ಯಪ್ಪ ಭಕ್ತರ (Ayyappa Devotees) ಬಸ್‍ಗೆ (Bus) ಲಾರಿ (Lorry) ಡಿಕ್ಕಿ ಹೊಡೆದ ಪರಿಣಾಮ 23 ಭಕ್ತರಿಗೆ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿರುವಂತಹ ಘಟನೆ ಕೇರಳದ (Kerala) ಕಣ್ಣೂರಿನ ಪೊನ್ನೂರು ಬಳಿ ನಡೆದಿದೆ.ಶಬರಿಮಲೆ ದರ್ಶನ ಮುಗಿಸಿ ಕರ್ನಾಟಕಕ್ಕೆ ಹಿಂದಿರುಗುತ್ತಿದ್ದ ರಾಮನಗರ (Ramanagara) ತಾಲೂಕಿನ ಪೇಟೆಕುರುಬರಹಳ್ಳಿಯ ಅಯ್ಯಪ್ಪ ಮಾಲಾಧಾರಿಗಳ ಬಸ್ ಇಟ್ಟಿಗೆ ತುಂಬಿಕೊಂಡು ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಮಿನಿ ಬಸ್ ಮುಂಭಾಗ ಸಂಪೂರ್ಣ ಜಖಂ ಆಗಿದ್ದು ಮಿನಿ ಬಸ್ ಚಾಲಕ ಸೇರಿ ಮತ್ತೋರ್ವನಿಗೆ ಗಂಭೀರ ಗಾಯವಾಗಿದೆ. ಇದನ್ನೂ ಓದಿ: ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ – ಓರ್ವ ಶಿಕ್ಷಕ ಸೇರಿ ಇಬ್ಬರು ಕಾಮುಕರು ಅರೆಸ್ಟ್ಗಾಯಾಳು ಭಕ್ತರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನವೆಂಬರ್ 20ರ ರಾತ್ರಿ ಶಬರಿಮಲೆ ದರ್ಶನಕ್ಕೆಂದು ಮಾಲೆ ಧರಿಸಿ ತೆರಳಿದ್ದರು. ಶಬರಿಮಲೆ ದರ್ಶನ ಮುಗಿಸಿಕೊಂಡು ಧರ್ಮಸ್ಥಳದತ್ತ ಬರುವಾಗ ಅವಘಡ ಸಂಭವಿಸಿದೆ. ಅವಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಪೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅಮಿತಾಭ್ ಹೆಸರಿನಲ್ಲಿ ನಕಲಿ ಲಾಟರಿ: ಕಾನೂನು ಹೋರಾಟದಲ್ಲಿ ಬಚ್ಚನ್ ಗೆಲುವು
Sign in to your account
Username or Email Address


Password

 Remember Me


