ಬೆಂಗಳೂರು: ಬಿಬಿಎಂಪಿಗೆ (BBMP) ಸಂಬಂಧಿಸಿದ ಮಹತ್ವದ ಕಡತವೊಂದು (File)  ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಕಚೇರಿಯಿಂದ ನಾಪತ್ತೆಯಾಗಿರೋ ಶಂಕೆ ವ್ಯಕ್ತವಾಗಿದ್ದು, ಭಾರೀ ಸಂಚಲನಕ್ಕೆ ಕಾರಣವಾಗಿದೆ.ಮುಖ್ಯಮಂತ್ರಿಗಳ ಮಾಹಿತಿಗೆಂದು ಕಳೆದ ವರ್ಷ ಬೆಂಗಳೂರು ನಗರಾಭಿವೃದ್ಧಿ ಕಚೇರಿಯಿಂದ ಸಿಎಂ ಕಚೇರಿಗೆ ಕಳುಹಿಸಲಾಗಿದ್ದ ಬೆಂಗಳೂರಿನ ಜಾಹೀರಾತು ನಿಯಮ-2019ರ ಕಡತ ಮತ್ತೆ ನಗರಾಭಿವೃದ್ಧಿ ಕಚೇರಿಗೆ ವಾಪಸ್ ಹೋಗಿಲ್ಲ. ಈ ಸಂಬಂಧ ಸಿಎಂ ಪ್ರಧಾನ ಕಾರ್ಯದರ್ಶಿಗೆ ಇದೇ ನ.22ರಂದು ಪತ್ರ ಬರೆದಿರುವ ಬೆಂಗಳೂರು ನಗರಾಭಿವೃದ್ದಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು, 2021ರ ಡಿಸೆಂಬರ್ 7ರಂದು ಸಿಎಂ ಕಚೇರಿಗೆ ಕಳಿಸಲಾಗಿದ್ದ ಬಿಬಿಎಂಪಿ ಜಾಹೀರಾತು ನಿಯಮ-2019 ಫೈಲ್ ಇನ್ನೂ ವಾಪಸ್ ಬಂದಿಲ್ಲ. ಕೂಡ್ಲೇ ಕಳುಹಿಸಿಕೊಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಒಂದೇ ದಿನದಲ್ಲಿ ಮಹಿಳಾ ಆಯೋಗದ ದೂರುಗಳ ತನಿಖೆ ಪ್ರಾರಂಭಿಸಲು ಸೂಚನೆ: ಸಿಎಂಸಾರ್ವಜನಿಕ ಲೆಕ್ಕ ಪತ್ರ ಸಮಿತಿಗೆ ಮಾಹಿತಿ ಒದಗಿಸಬೇಕಿರುವುದರಿಂದ ಸದರಿ ಕಡತವನ್ನು ನಗರಾಭಿವೃದ್ಧಿಗೆ ಹಿಂತಿರುಗಿಸಿ ಎಂದು ಕೋರಿದ್ದಾರೆ. ಆದ್ರೆ, ಇದಕ್ಕೆ ಈವರೆಗೂ ಸಿಎಂ ಕಚೇರಿ ಯಾವುದೇ ಉತ್ತರ ನೀಡಿಲ್ಲ. ಇದರಿಂದ ನಗರಾಭಿವೃದ್ಧಿ ಇಲಾಖೆ ಕಂಗಾಲಾಗಿದೆ. ಜೊತೆಗೆ ಸಿಎಂ ಕಚೇರಿಯಿಂದ ಈ ಕಡತ ನಾಪತ್ತೆಯಾಗಿದ್ಯಾ? ಯಾರಾದ್ರೂ ಎಗರಿಸಿಕೊಂಡು ಹೋಗಿದ್ದಾರಾ ಎಂಬ ಅನುಮಾನ ಮೂಡಿದೆ. ಅಂದ ಹಾಗೆ, ಬೆಂಗಳೂರಿನ ಎಲ್ಲೆಲ್ಲಿ ಜಾಹೀರಾತು ಹಾಕಬೇಕು? ಎಲ್ಲೆಲ್ಲಿ ಹಾಕಬಾರದು? ಎಷ್ಟು ದರ ವಿಧಿಸಬೇಕು ಎಂಬುದನ್ನು ನಿರ್ಧರಿಸುವ ಮಹತ್ವದ ಕಡತ ಇದಾಗಿದೆ. ಇದ್ರಲ್ಲಿ ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರ ಅಡಗಿದೆ. ಈ ಫೈಲ್ ಇದೀಗ ನಾಪತ್ತೆಯಾಗಿದೆ. ಇದನ್ನೂ ಓದಿ: ಮಹಿಳೆಯರು ಏನೂ ಧರಿಸದಿದ್ರೂ ಚೆನ್ನಾಗಿ ಕಾಣಿಸುತ್ತಾರೆ: ಬಾಬಾ ರಾಮ್‌ದೇವ್
Sign in to your account
Username or Email Address


Password

 Remember Me


