ತುಮಕೂರು: ಕುಡಿದ ಮತ್ತಿನಲ್ಲಿ ಶಾಲಾ ವಿದ್ಯಾರ್ಥಿಗಳ ಮೇಲೆ ಶಾಲೆಯ ಆಡಳಿತ ಮಂಡಳಿಯ ನಿರ್ದೇಶಕ ಮನಸೋ ಇಚ್ಚೆ ದಾಳಿ ಮಾಡಿರುವ ಘಟನೆ ತುಮಕೂರು (Tumkuru) ತಾಲೂಕಿನ ಮಲ್ಲಸಂದ್ರದ ವಿಶ್ವಭಾರತಿ (VishwaBharathi) ವಸತಿ ಶಾಲೆಯಲ್ಲಿ ನಡೆದಿದೆ.ಆರೋಪಿಯನ್ನು ಶಾಲೆಯ ಕಾರ್ಯದರ್ಶಿ ಎನ್ ಮೂರ್ತಿಯ ಮಗ ಮತ್ತು ನಿರ್ದೇಶಕ ಭರತ್ ಎಂದು ಗುರುತಿಸಲಾಗಿದ್ದು, ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಬೆಲ್ಟ್ ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ. ನಾಲ್ಕು ದಿನಗಳು ಕಳೆದರೂ ಈ ವಿಚಾರವನ್ನು ಶಾಲಾ ಆಡಳಿತ ಮಂಡಳಿ ಮುಚ್ಚಿಟ್ಟಿತ್ತು. ಆದರೆ ನಂತರ ಪೋಷಕರು ವಿಚಾರ ತಿಳಿದು ಮಕ್ಕಳನ್ನು ಭೇಟಿ ಮಾಡಿದ್ದಾರೆ.  ಇದನ್ನೂ ಓದಿ: ಮಧ್ಯದ ಬೆರಳು ತೋರಿಸಿದ ಬೈಕ್ ಸವಾರನಿಗೆ ಮನಬಂದಂತೆ ಥಳಿಸಿದ BMTC ಚಾಲಕ ಅಮಾನತುಕುಡಿತ ಮತ್ತಿನಲ್ಲಿ ಬಂದ ಭರತ್ ಮಕ್ಕಳು ಬೇಗ ಮಲಗಿದ್ದಾರೆಂದು ಮಕ್ಕಳ ತೊಡೆ ಮತ್ತು ಮರ್ಮಾಂಗಗಳ ಮೇಲೆ ಕಾರಣವಿಲ್ಲದೇ ಹಲ್ಲೆ ನಡೆಸಿದ್ದಾನೆ. ರಾತ್ರಿ ಹತ್ತುಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಮಕ್ಕಳು ದಮ್ಮಯ್ಯ ಅಂದರೂ, ಕಾಲಿಗೆ ಬಿದ್ದರೂ ಬಿಟ್ಟಿಲ್ಲ. ಎಣ್ಣೆ ನಶೆ ಕಡಿಮೆಯಾಗುವವರೆಗೂ ಹಲ್ಲೆ ನಡೆಸಿದ್ದಾನೆ. ಅಲ್ಲದೇ ಒಂದು ಮಗುವಿನ ಕೈ ಮುರಿದು ಹೋಗುವಂತೆ ಥಳಿಸಿದ್ದಾನೆ.ಮೂರು ದಿನಗಳ ನಂತರ ಈ ಬಗ್ಗೆ ಮಕ್ಕಳು ಪೋಷಕರಿಗೆ ತಿಳಿಸಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ರಾತ್ರೋ ರಾತ್ರಿ ವಸತಿ ಶಾಲೆಗೆ ಬಂದ ಪೋಷಕರು, ಸದ್ಯ ತಲೆ ಮರೆಸಿಕೊಂಡಿರುವ ಭರತ್ ವಿರುದ್ಧ ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಫುಟ್ ಬೋರ್ಡ್‍ನಲ್ಲಿ ವಿದ್ಯಾರ್ಥಿಗಳ ಪ್ರಯಾಣ – ಬಸ್ ಸಿಬ್ಬಂದಿಗೆ 25 ಸಾವಿರ ರೂ. ದಂಡ
Sign in to your account
Username or Email Address


Password

 Remember Me


