ದಕ್ಷಿಣ ಭಾರತದ ಸ್ಟಾರ್ ನಟಿ ಸಮಂತಾ(Samantha) `ಯಶೋದ’ (Yashoda) ಚಿತ್ರದ ಸಕ್ಸಸ್ ಖುಷಿಯಲ್ಲಿದ್ದಾರೆ. ಇದರ ನಡುವೆ ಆರೋಗ್ಯದ ವಿಚಾರವಾಗಿಯೂ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ನಟಿಯ ಆರೋಗ್ಯದ ಬಗ್ಗೆ ಕೆಲ ಕಿಡಿಗೇಡಿಗಳು ಸುಳ್ಳು ಸುದ್ದಿ ಕೂಡ ಹಬ್ಬಿಸುತ್ತಿದ್ದಾರೆ. ಸಮಂತಾ ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಸುಳ್ಳು ವದಂತಿಯನ್ನ ಹಬ್ಬಿಸಲಾಗಿದೆ. ಅಂತಹ ಕಿಡಿಗೇಡಿಗಳ ವಿರುದ್ಧ ರಾಂಗ್ ಆಗಿದ್ದಾರೆ.ಸಮಂತಾ ಮೈಯೋಸಿಟಿಸ್‌ನಿಂದ ಬಳಲುತ್ತಿರುವ ವಿಚಾರ ಕೆಲ ದಿನಗಳ ಹಿಂದೆ ತಿಳಿಸಿದ್ದರು. ಅನಾರೋಗ್ಯದ ನಡುವೆಯೇ ನಟಿ `ಯಶೋದ’ ಪ್ರಚಾರದಲ್ಲಿ ಭಾಗಿಯಾಗಿದ್ದರು. ಅವರು ಇನ್ನೂ ಪೂರ್ತಿ ಆರೋಗ್ಯ ಚೇತರಿಕೆ ಕಂಡಿಲ್ಲ. ಈ ಬೆನ್ನಲ್ಲೇ ಕೆಲ ಕಿಡಿಗೇಡಿಗಳು ನಟಿಯ ಬಗ್ಗೆ ಇಲ್ಲ ಸಲ್ಲದ ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ನಟಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುಳ್ಳು ವದಂತಿ ಸೃಷ್ಟಿಸಿದ್ದರು. ಈ ವಿಷ್ಯವಾಗಿ ಅಭಿಮಾನಿಗಳು ಕೂಡ ಗೊಂದಲಕ್ಕೆ ಒಳಗಾಗಿದ್ದಾರೆ. ಇದನ್ನೂ ಓದಿ: ವಿದ್ಯಾಭರಣ್ ಬಗ್ಗೆ ಮೊದಲೇ ಗೊತ್ತಾಗಿದ್ದು ಒಳ್ಳೆಯದಾಯ್ತು: ನಟಿ ವೈಷ್ಣವಿ ಸ್ಪಷ್ಟನೆಕೆಲವು ಯೂಟ್ಯೂಬ್ ಚಾನೆಲ್‌ಗಳು ನಟಿಯ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿಗಳನ್ನ ಬಿತ್ತರಿಸಿದ್ದರು. ಇದರಿಂದ ಸಮಂತಾ ವೃತ್ತಿ ಜೀವನಕ್ಕೆ ತೊಂದರೆ ಆಗುವಂತಿತ್ತು. ಹಾಗಾಗಿ ಅಂತಹ ಯೂಟ್ಯೂಬ್ ಚಾನೆಲ್ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ. ಈ ಕುರಿತು ಗಾಸಿಪ್ ಹಬ್ಬಿಸಿರುವವರ ವಿರುದ್ಧ ತಕ್ಕ ಪಾಠ ಕಲಿಸಲು ರೆಡಿಯಾಗಿದ್ದಾರೆ.ಸಮಂತಾ, ನಟನೆಯ `ಖುಷಿ’ ಮತ್ತು `ಶಾಕುಂತಲA’ ಚಿತ್ರಗಳು ಮುಂದಿನ ವರ್ಷ ತೆರೆಗೆ ಅಪ್ಪಳಿಸಲಿದೆ.
Sign in to your account
Username or Email Address


Password

 Remember Me


