ಕಿರುತೆರೆ ನಟಿ ವೈಷ್ಣವಿ ಗೌಡ (Vaishnavi GOwda) ನಿಶ್ಚಿತಾರ್ಥದ ವಿವಾದ ವಿಚಾರವಾಗಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದಾರೆ. ವಿದ್ಯಾಭರಣ ವಿಷ್ಯವಾಗಿ ಸಾಕಷ್ಟು ಆರೋಪ ಕೇಳಿ ಬಂದ ಬೆನ್ನಲ್ಲೇ ವೈಷ್ಣವಿ ತಂದೆ ರವಿಕುಮಾರ್ (Ravikumar) ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.ವಿದ್ಯಾಭರಣ(Vidyabharan)  ಬಗ್ಗೆ ಮೊದಲೇ ಗೊತ್ತಾಗಿದ್ದು ಒಳ್ಳೆಯದಾಯ್ತು. ಈ ವಿಚಾರ ಇಲ್ಲಿಗೆ ಬಿಟ್ಟುಬಿಡಿ ಎಂದು ನಟಿ ಮನವಿ ಮಾಡಿದ್ದರು. ಇದೀಗ ವೈಷ್ಣವಿ ತಂದೆ ರವಿಕುಮಾರ್ ಈ ಬಗ್ಗೆ ಮಾತನಾಡಿದ್ದಾರೆ. ನಮಗೂ ಈ ಬಗ್ಗೆ ಶಾಕ್ ಆಗಿದೆ ಎಂದು ಮಾತನಾಡಿದ್ದಾರೆ.ಇದೀಗ ಮದುವೆ ಕ್ಯಾನ್ಸಲ್‌ ಆಗಿದೆ. ಇಷ್ಟೆಲ್ಲ ನಡೆದ ಮೇಲೆ ಈ ಸಂಬಂಧವನ್ನು ಮುಂದುವರೆಸುವುದು ಬೇಡ ಎಂದು ಅನಿಸಿತು. ನಮಗೂ ಶಾಕ್ ಆಗಿದೆ. ವೈಷ್ಣವಿ ರೂಂನಿಂದ ಹೊರ ಬಂದಿಲ್ಲ. ತುಂಬಾ ಫೆಡ್ ಅಪ್ ಆಗಿದ್ದಾರೆ. ನಮಗೂ ಕೂಡ ಈ ಬಗ್ಗೆ ಮೊದಲೂ ಏನೂ ಗೊತ್ತಿರಲಿಲ್ಲ. ಆಡಿಯೋ ಬಗ್ಗೆ ಟಿವಿಯಲ್ಲಿ ನೋಡಿದಾಗ ಗೊತ್ತಾಗಿದ್ದು. ಆ ಆಡಿಯೋ ಕೇಳಿ ತುಂಬಾ ಬೇಜಾರಾಗಿದೆ. ಜನವರಿಯಲ್ಲಿ ಎಂಗೇಜ್‌ಮೆಂಟ್ ಮಾಡಲು ತೀರ್ಮಾನ ಮಾಡಿದ್ದೇವು. ಸದ್ಯ ಇವಾಗ ಬೊಟ್ಟು ಇಡುವ ಶಾಸ್ತ್ರ ಮಾಡಿದ್ದೇವು.  A post shared by Vaishnavi (@iamvaishnavioffl)ಯಾರೋ ಆಗದೇ ಇರೋರು ಈ ರೀತಿ ಮಾಡಿರಬಹುದು. ಇದು ನನ್ನ ಮಗಳ ಜೀವನ. ಅವಳಿಗೆ ಸಂಪೂರ್ಣ ನಿರ್ಧಾರಕ್ಕೆ ಬಿಟ್ಟಿದ್ದೇನೆ. ಅವಳು ಏನು ನಿರ್ಧಾರ ತಗೋತ್ತಾಳೆ ಅನ್ನೋದು ಅವಳಿಗೆ ಬಿಟ್ಟಿದ್ದು ಎಂದು ವೈಷ್ಣವಿ ತಂದೆ ಮಾತನಾಡಿದ್ದಾರೆ.ಬಿಗ್ ಬಾಸ್ ನಂತರ ಕಿರುತೆರೆಯಿಂದ ದೂರ ಉಳಿದಿದ್ದ ನಟಿ ಮತ್ತೆ ಹೊಸ ಧಾರಾವಾಹಿ ಮೂಲಕ ವೈಷ್ಣವಿ ಕಂಬ್ಯಾಕ್ ಆಗಿದ್ದಾರೆ. ಈ ಮಧ್ಯೆ ನಟಿಯ ಎಂಗೇಜ್‌ಮೆಂಟ್ ವಿಚಾರ ಎಲ್ಲೆಡೆ ಸದ್ದು ಮಾಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ವೈಷ್ಣವಿ ಇದು ಪಕ್ಕಾ ಅರೇಂಜ್ಡ್ ಮ್ಯಾರೇಜ್ ಹುಡುಗನ ಕಡೆಯವರು ಬಂದು ನೋಡಿ, ಮಾತುಕತೆ ಮಾಡಿರೋದು ನಿಜಾ ಆದರೆ ಇದು ಎಂಗೇಜ್‌ಮೆಂಟ್ ಅಲ್ಲ, ನಾನಿನ್ನೂ ಒಪ್ಪಿಕೊಂಡಿಲ್ಲ ಎಂದು ಈ ಹಿಂದೆಯೇ ಪಬ್ಲಿಕ್ ಟಿವಿ ಡಿಜಿಟಲ್‌ಗೆ ಸ್ಪಷ್ಟನೆ ನೀಡಿದ್ದರು.
Sign in to your account
Username or Email Address


Password

 Remember Me


