ಬೆಂಗಳೂರು: ಬಸ್ಸಿನೊಳಗೆ ಬಂದು ಮಧ್ಯದ ಬೆರಳು ತೋರಿಸಿ ಚಾಲಕನನ್ನು ಪ್ರಶ್ನಿಸಿದ ಬೈಕ್ ಸವಾರನಿಗೆ ಬಿಎಂಟಿಸಿ (BMTC) ಚಾಲಕ ಮನಬಂದಂತೆ ಥಳಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಘಟನೆ ಬಳಿಕ ಬಿಎಂಟಿಸಿ ಚಾಲಕನನ್ನ (BMTC Driver) ಅಮಾನತು ಮಾಡಿದೆ. ಸದ್ಯ ಬೈಕ್ ಸವಾರನಿಗೆ ಹಿಗ್ಗಾಮುಗ್ಗಾ ಥಳಿಸಿರೋ ವೀಡಿಯೋ ಜಾಲತಾಣದಲ್ಲಿ (Social Media) ಹರಿದಾಡುತ್ತಿದೆ. ಇದನ್ನೂ ಓದಿ: ಝಾಕೀರ್‌ ನಾಯ್ಕ್‌ The Real Inspiration – ಐಸಿಸ್‌ ಉಗ್ರರಂತೆ ಪೋಸ್‌ ನೀಡಿ ಪ್ರತೀಕಾರದ ಪ್ರತಿಜ್ಞೆಬೈಕ್ ಸವಾರನೊಬ್ಬ ಯಲಹಂಕ ಮಾರ್ಗವಾಗಿ ಚಲಿಸುತ್ತಿದ್ದ ಬಿಎಂಟಿಸಿ ಬಸ್‌ಗೆ ಜಾಗ ಬಿಡದೇ ತೊಂದರೆ ಕೊಡುತ್ತಿದ್ದ. ಈ ವೇಳೆ ಬಸ್ ಚಾಲಕ ಬೈಕ್ ಸವಾರನಿಗೆ ಬೈದಿದ್ದಾರೆ. ನಂತರ ಆತ ಬೈಕ್ ನಿಲ್ಲಿಸಿ, ಬಸ್‌ನೊಳಗೇ ಬಂದು ಪ್ರಶ್ನೆ ಮಾಡಿದ್ದಾನೆ. ಚಾಲಕನಿಗೆ ಬಾಯಿಗೆ ಬಂದಂತೆ ಬೈದು, ಮಧ್ಯದ ಬೆರಳು ತೋರಿಸಿದ್ದಾನೆ. ಇದನ್ನೂ ಓದಿ: ಆಯತಪ್ಪಿ ಬಿದ್ದ ವಿದ್ಯಾರ್ಥಿನಿ – ಬಸ್ ಚಕ್ರ ಹರಿದು ಕಾಲು ಮುರಿತಇದರಿಂದ ರೊಚ್ಚಿಗೆದ್ದ ಚಾಲಕ ಮನಬಂದಂತೆ ಹಿಗ್ಗಾ-ಮುಗ್ಗಾ ಥಳಿಸಿದ್ದಾನೆ. ಬೈಕ್ ಸವಾರನಿಗೆ ಥಳಿಸಿರೋ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಎಲ್ಲೆಡೆ ಆಕ್ಷೇಪ ವ್ಯಕ್ತವಾಗಿದೆ. ವೀಡಿಯೋ ಬೆಳಕಿಗೆ ಬಂದ ಬೆನ್ನಲ್ಲೇ ಬಿಎಂಟಿಸಿ ಚಾಲಕನನ್ನು ಅಮಾನತು ಮಾಡಿದೆ.
Sign in to your account
Username or Email Address


Password

 Remember Me


