ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ಮಧ್ಯರಾತ್ರಿಯಿಂದಲೂ ಮೋಡ ಕವಿದ ವಾತಾವರಣ ಜೊತೆ ತುಂತುರು ಮಳೆಯಾಗುತ್ತಿದೆ. ಇದರಿಂದ ಕೆಲಸ, ಕಛೇರಿಗೆ ತೆರಳಲು ಜನರಿಗೆ ಮಳೆರಾಯ ಅಡ್ಡಿ ಪಡಿಸಿದ್ದು, ಬೆಂಗಳೂರಿನ ವಾತಾವರಣಕ್ಕೆ ಸಿಲಿಕಾನ್ ಸಿಟಿ ಮಂದಿ ಹೈರಾಣಾಗಿದ್ದಾರೆ.ಬಂಗಾಳಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಮುಂದಿನ ಎರಡು ದಿನಗಳ ಕಾಲ ಮೋಡ ಕವಿದ ವಾತಾವರಣ ಇರಲಿದ್ದು, ತುಂತುರು ಮಳೆಯಾಗುವ ಸಾಧ್ಯತೆ ಇದೆ. ವಾಯುಭಾರ ಕುಸಿತದ ಮಾರುತ ಅರಬ್ಬೀ ಸಮುದ್ರದಿಂದ ಕೇರಳ ಕಡೆಗೆ ಸಾಗುತ್ತಿದೆ. ಹೀಗಾಗಿ ಮುಂದಿನ ಎರಡು ದಿನ ರಾಜ್ಯಾದ್ಯಂತ ಜಿಟಿ, ಜಿಟಿ ಮಳೆಯಾಗದ್ದು, ಚಳಿಯಿಂದ ಕೂಡಿರಲಿದೆ.ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಕಾರಣದಿಂದಾಗಿ ನವೆಂಬರ್ 24ರಂದು ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆಯಿದೆ. ಮಂಗಳೂರು, ಶಿವಮೊಗ್ಗ, ಮೈಸೂರು, ಮಂಡ್ಯ, ಮಡಿಕೇರಿ, ಹಾಸನ, ಚಾಮರಾಜನಗರ, ಚಿಕ್ಕಬಳ್ಳಾಪುರ, ತುಮಕೂರು, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಇನ್ನುಳಿದ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಮೋಡ ಕವಿದ ವಾತಾವರಣ ಇರಲಿದೆ.ಬೆಂಗಳೂರಿನಲ್ಲಿ ಇಂದು ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರದಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಇರಲಿದೆ.ನಗರಗಳ ಹವಾಮಾನ ವರದಿ:
ಬೆಂಗಳೂರು: 27-18
ಮಂಗಳೂರು: 31-24
ಶಿವಮೊಗ್ಗ: 31-19
ಬೆಳಗಾವಿ: 31-19
ಮೈಸೂರು: 29-19
ಮಂಡ್ಯ: 29-19ಮಡಿಕೇರಿ: 26-16
ರಾಮನಗರ: 29-19
ಹಾಸನ: 28-18
ಚಾಮರಾಜನಗರ: 28-19
ಚಿಕ್ಕಬಳ್ಳಾಪುರ: 26-17
ಕೋಲಾರ: 26-18ತುಮಕೂರು: 29-19
ಉಡುಪಿ: 32-24
ಕಾರವಾರ: 32-25
ಚಿಕ್ಕಮಗಳೂರು: 28-17
ದಾವಣಗೆರೆ: 32-30 ಹುಬ್ಬಳ್ಳಿ: 32-20
ಚಿತ್ರದುರ್ಗ: 30-19
ಹಾವೇರಿ: 32-20
ಬಳ್ಳಾರಿ: 32-21
ಗದಗ: 31-20
ಕೊಪ್ಪಳ: 31-21ರಾಯಚೂರು: 32-22
ಯಾದಗಿರಿ: 32-21
ವಿಜಯಪುರ: 32-21
ಬೀದರ್: 29-17
ಕಲಬುರಗಿ: 32-21
ಬಾಗಲಕೋಟೆ: 32-22
Sign in to your account
Username or Email Address


Password

 Remember Me


