ಚಾಮರಾಜನಗರ: ಮೈಸೂರು (Mysuru) 2007 ರಿಂದಲೇ ಉಗ್ರರ ಸ್ಲೀಪರ್ ಸೆಲ್ ಆಗಿದೆ. ಮೈಸೂರು ಪಿಎಫ್‌ಐನ (PFI) ಪ್ರಯೋಗ ಶಾಲೆಯಾಗಿದೆ. ಈ ಜಿಲ್ಲೆಯಲ್ಲಿ ಸಾಕಷ್ಟು ಗಲಾಟೆ ಹಾಗೂ ಕೊಲೆಗಳಾಗಿವೆ. ಮೈಸೂರು ಅಥವಾ ಕರಾವಳಿಯಲ್ಲಿ ಎನ್‌ಐಎ (NIA) ಘಟಕ ತೆರೆಯಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಆಗ್ರಹಿಸಿದರು.ಚಾಮರಾಜನಗರದಲ್ಲಿ (Chamarajanagar) ಮಾತನಾಡಿದ ಮುತಾಲಿಕ್, ದೇವಸ್ಥಾನದ ಮೇಲೆ ದಾಳಿ ಮಾಡುವ ಮನಸ್ಥಿತಿ ಇರುವುದು ಶಂಕಿತ ಉಗ್ರ ಶಾರೀಕ್ ಒಬ್ಬನಿಗೆ ಅಲ್ಲ. ಘಜನಿಯಿಂದ ಟಿಪ್ಪು ಸುಲ್ತಾನ್‌ವರೆಗೂ ಎಲ್ಲರೂ ದೇವಸ್ಥಾನದ ಮೇಲೆ ದಾಳಿ ಮಾಡಿಕೊಂಡೇ ಬಂದಿದ್ದಾರೆ. ಇಂತಹ ಸಾವಿರಾರು ಇನ್ನೂ ಇದ್ದು ಇಂತಹ ಕುಕೃತ್ಯಕ್ಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಪ್ರಮೋದ್ ಮುತಾಲಿಕ್ ಆರೋಪಿಸಿದರು.ಪೊಲೀಸ್ ಇಲಾಖೆ ನಿದ್ರೆ ಮಾಡುತ್ತಿದೆ, ಅವರೇ ಮೋಸ್ಟ್ ಡೇಂಜರಸ್. ಪೊಲೀಸ್ ಇಲಾಖೆಗೆ ಭಯೋತ್ಪಾದಕರು ಹಾಗೂ ಕಿಡಿಗೇಡಿಗಳ ಬಗ್ಗೆ ಎಲ್ಲವೂ ಗೊತ್ತಿರುತ್ತದೆ. ಒಂದು ಕಡೆ ಸರ್ಕಾರದ ನಿರ್ಲಕ್ಷ್ಯ, ಇನ್ನೊಂದು ಕಡೆ ಕಾಂಗ್ರೆಸ್‌ನಿಂದ ಮುಸ್ಲಿಮರ ತುಷ್ಟೀಕರಣ. ಇದುವೇ ಇವತ್ತಿನ ಭಯೋತ್ಪಾದನೆಗೆ ಮೂಲ ಕಾರಣ ಎಂದು ಗುಡುಗಿದರು. ಇದನ್ನೂ ಓದಿ: ಸಿದ್ದರಾಮಯ್ಯನವರ ಸ್ಥಿತಿ ಅಂಡು ಸುಟ್ಟ ಬೆಕ್ಕಿನಂತಾಗಿದೆ – ಯತ್ನಾಳ್‌ ಲೇವಡಿಮುಸ್ಲಿಮರ ಬಗ್ಗೆ ಭಯವೋ, ಕಾಳಜಿಯೋ ಗೊತ್ತಿಲ್ಲ. ಪೊಲೀಸ್ ಇಲಾಖೆ ಸರಿಯಾಗಿ ಕ್ರಮ ತೆಗೆದುಕೊಳ್ಳದೇ ಇರುವುದೇ ಭಯೋತ್ಪಾದನೆಗೆ ಕಾರಣವಾಗಿದೆ. ಶಾರೀಕ್ ಮೇಲೆ ಹಿಂದೆಯೆ ಕೇಸ್ ಆಗಿ ಬಂಧಿಸಲಾಗಿತ್ತು. ಆತ ಜೈಲಿನಿಂದ ಬಂದಮೇಲೆ ಪೊಲೀಸರು ಆತನ ಮೇಲೆ ಕಣ್ಣಿಡಬೇಕಿತ್ತು ಎಂದು ಹೇಳಿಕೆ ನೀಡಿದರು. ಇದನ್ನೂ ಓದಿ: ಶ್ರದ್ಧಾ ವಾಕರ್‌ ಕೊಲೆ ಪ್ರಕರಣ ಲವ್‌ ಜಿಹಾದ್‌ ಅಲ್ಲ – ಅಸಾದುದ್ದೀನ್‌ ಓವೈಸಿ
Sign in to your account
Username or Email Address


Password

 Remember Me


