ಬೆಳಗಾವಿ: ಗಡಿ ವಿವಾದದ ಬಗ್ಗೆ ಸುಪ್ರೀಂಕೋರ್ಟ್‍ನಲ್ಲಿ (Supreme Court) ತಾನೇ ಧಾವೆ ಹೂಡಿರುವ ಮಹಾರಾಷ್ಟ್ರ ಸರ್ಕಾರ ಇದೀಗ ಮತ್ತೆ ಹೊಸ ವರಸೆ ಶುರು ಮಾಡಿದ್ದು ಮಾತುಕತೆ ಮೂಲಕ ಬಗೆಹರಿಯಬೇಕು ಎಂದು ವಾದ ಮಂಡಿಸುತ್ತಿದೆ.ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಹಾರಾಷ್ಟ್ರ (Maharashtra) ಸಿಎಂ ಏಕನಾಥ ಶಿಂಧೆ (Eknath Shinde) ಅವರು, ಗಡಿ ವಿವಾದ ಕುರಿತು ನಾವು ಈಗಾಗಲೇ ಸಭೆ ನಡೆಸಿದ್ದೇವೆ. ಈ ಹಳೆಯ ವಾದವೇನಿದೆ ಅದು ನ್ಯಾಯಾಲಯದ ಮುಂದಿದೆ. ಸುಪ್ರೀಂಕೋರ್ಟ್‍ನಲ್ಲಿ ಕಾನೂನು ಹೋರಾಟ ನಡೆಯುತ್ತಿದೆ. ಆದರೆ ಇದರ ಜೊತೆಗೆ ಈ ವಿಷಯ ಮಾತುಕತೆ ಮೂಲಕ ಬಗೆಹರಿಯಬೇಕು. ಇದು ಮಹಾರಾಷ್ಟ್ರ ಸರ್ಕಾರದ ನಿಲುವಾಗಿದೆ. ಎರಡೂ ರಾಜ್ಯಗಳ ರಾಜ್ಯಪಾಲರ ಸಭೆಯಾಗಿದೆ. ಕೇಂದ್ರ ಸರ್ಕಾರ ಸಹ ಸಕಾರಾತ್ಮಕ ನಿಲುವು ವ್ಯಕ್ತಪಡಿಸಬೇಕಿದೆ. ಈ ವಿವಾದ ಸರ್ವ ಸಮ್ಮತಿ ಮೂಲಕ ಬಗೆಹರಿಯಬೇಕೆಂಬುದು ನಮ್ಮ ನಿಲುವಾಗಿದೆ. ಈ ನಿಟ್ಟಿನಲ್ಲಿ ನಾವು ಸಭೆಯನ್ನು ಸಹ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.  ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಪಕ್ಷ ಬಿಡಲ್ಲ, ಭವಿಷ್ಯ ಬಿಜೆಪಿಯಲ್ಲೇ ಇದೆ: ಯತ್ನಾಳ್ಮಹಾರಾಷ್ಟ್ರ ಸರ್ಕಾರದ ಯೋಜನೆಯ ಲಾಭ ಗಡಿಭಾಗದ ಮರಾಠಿಗರಿಗೆ ಏನು ಸಿಗುತ್ತಿತ್ತೋ ಅದನ್ನು ಹೆಚ್ಚಿಸಿದ್ದೇವೆ. ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ ಹತ್ತು ಸಾವಿರ ರೂಪಾಯಿ 20 ಸಾವಿರಕ್ಕೆ ಹೆಚ್ಚಳವಾಗಿದೆ. ಮುಖ್ಯಮಂತ್ರಿ ಧರ್ಮಾದಾಯ ಸಹಾಯ ನಿಧಿ ಯೋಜನೆಯ ಲಾಭ ಬಂದ್ ಆಗಿತ್ತು. ಅದನ್ನು ಶುರು ಮಾಡಿದ್ದೇವೆ. ಗಡಿಭಾಗದ ಮರಾಠಿಗರಿಗೆ ಆರೋಗ್ಯ ಸೌಲಭ್ಯ ನೀಡಲು ಮಹಾತ್ಮ ಜ್ಯೋತಿಬಾ ಪುಲೆ ಯೋಜನೆ ನೀಡಲು ನಿರ್ಣಯ ತೆಗೆದುಕೊಳ್ಳಲಾಗಿದೆ. ಗಡಿ ಭಾಗದ ಮರಾಠಿಗರಿಗೆ ಮಹಾರಾಷ್ಟ್ರ ಸರ್ಕಾರದಿಂದ ಸಿಗುವ ಯೋಜನೆಗಳ ಲಾಭ ಹೆಚ್ಚಿಸಿದ್ದೇವೆ. ಈ ವಿಷಯ ಮಾತುಕತೆ ಮೂಲಕ ಬಗೆಹರಿಯಬೇಕು ಎಂಬುದು ನಮ್ಮ ನಿಲುವು. ಮತ್ಯಾರೋ ವಾದ ಸೃಷ್ಟಿಸಿ ಮತ್ತಷ್ಟು ಜಟಿಲಗೊಳಿಸಬಾರದು. ನಾವು ಸಭೆ ನಡೆಸಿದಾಗ ಸಾಕಷ್ಟು ಸಲಹೆಗಳು ಬಂದಿವೆ ಎಂದಿದ್ದಾರೆ. ಇದನ್ನೂ ಓದಿ: ಎಲ್ಲಾ ಮುಸ್ಲಿಮರನ್ನ ಕೊಂದು ಹಿಂದೂ ರಾಷ್ಟ್ರ ನಿರ್ಮಾಣ ಮಾಡಿ: ಖಾಲಿದ್ ಆಕ್ರೋಶ
Sign in to your account
Username or Email Address


Password

 Remember Me


