ಬೆಂಗಳೂರು: ಪುಟ್ಟೇನಹಳ್ಳಿ (Puttenahalli) ವೃದ್ಧರ (Old Man) ಶವ ಬ್ಯಾಗ್‍ನಲ್ಲಿ ಪತ್ತೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಮನೆ ಕೆಲಸದಾಕೆ ಜೊತೆ ಲೈಂಗಿಕ ಕ್ರಿಯೆಯಲ್ಲಿ (Sex) ತೊಡಗಿದ್ದಾಗ ಹೃದಯಾಘಾತವಾಗಿ (Heart Attack) ಸಾವನ್ನಪ್ಪಿರುವ ಸತ್ಯ ತನಿಖೆ ವೇಳೆ ಬಯಲಾಗಿದೆ.ನವೆಂಬರ್ 16 ರಂದು ಮೊಮ್ಮಗನನ್ನು ಬ್ಯಾಡ್ಮಿಂಟನ್ ಕ್ಲಾಸ್‍ಗೆ ಕರೆದುಕೊಂಡು ಹೋಗಿದ್ದ ವೃದ್ಧ ಬಾಲಸುಬ್ರಮಣಿಯನ್ (67) ಸಂಜೆ 4:55ರ ವೇಳೆಗೆ ಸೊಸೆಗೆ ಕರೆ ಮಾಡಿ ಹೊರಗಡೆ ಕೆಲಸ ಇದೆ ಎಂದು ತಿಳಿಸಿದ್ರು. ಬಳಿಕ ಕರೆ ಮಾಡಿದ್ರೆ ಫೋನ್ ಸ್ವಿಚ್ ಆಫ್ ಆಗಿತ್ತು. ಆ ನಂತರ ಮಗ ಠಾಣೆಗೆ ನಾಪತ್ತೆ ದೂರು ದಾಖಲಿಸಿದ್ರು. ಈ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರಿಗೆ ಶಾಕ್ ಕಾದಿತ್ತು. ನ.18 ರಂದು ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಚೀಲ ಮತ್ತು ಬೆಡ್‍ಶೀಟ್‍ನಲ್ಲಿ ಸುತ್ತಿದ್ದ ಮೃತದೇಹವೊಂದು ಜೆಪಿ ನಗರದ 6ನೇ ಹಂತದ ಸಮೀಪ ಪತ್ತೆಯಾಗಿತ್ತು. ಇದು ಬಾಲಸುಬ್ರಮಣಿಯನ್ ಎಂದು ಗುರುತಿಸಲಾಗಿತ್ತು. ಬಳಿಕ ಬಾಲಸುಬ್ರಮಣಿಯನ್ ಸಾವಿನ ಬಗ್ಗೆ ಅನುಮಾನ ಮೂಡಿತ್ತು. ಇದನ್ನೂ ಓದಿ: ಚೀಲ, ಬೆಡ್‍ಶೀಟ್‍ನಲ್ಲಿ ಸುತ್ತಿದ ರೀತಿಯಲ್ಲಿ ವೃದ್ಧನ ಮೃತದೇಹ ಪತ್ತೆದೇಹದ ಮೇಲೆ ಯಾವುದೇ ಗಾಯಗಳು ಕಂಡು ಬಂದಿರಲಿಲ್ಲ. ಸಿಡಿಆರ್ ಪರಿಶೀಲಿಸಿದಾಗ ಶಾಕಿಂಗ್ ವಿಚಾರ ಬೆಳಕಿಗೆ ಬಂದಿತ್ತು. ಬಾಲಸುಬ್ರಮಣಿಯನ್ ಕಾಲ್ ಹಿಸ್ಟರಿ ಜಾಲಾಡಿದಾಗ ನಿರಂತರವಾಗಿ ಮಹಿಳೆಯೊಬ್ಬರ ಜೊತೆಗೆ ಸಂಪರ್ಕ ಇರುವುದು ಬಯಲಾಗಿತ್ತು. ಸಾರಕ್ಕಿ ಸಿಗ್ನಲ್ ಬಳಿ ಲಾಸ್ಟ್ ಲೊಕೇಶನ್ ದಾಖಲಾಗಿತ್ತು. ಹೀಗಾಗಿ ಆ ಮಹಿಳೆ ಯಾರು ಅನ್ನೋದರ ಕುರಿತು ಖಾಕಿ ಬೆನ್ನು ಬಿದ್ದಿತ್ತು. ತನಿಖೆ ವೇಳೆ ಬಾಲಸುಬ್ರಮಣಿಯನ್ ಮನೆಗೆ ಬರುತ್ತಿದ್ದ ಮನೆ ಕೆಲಸದಾಕೆ ಮೇಲೆ ಅನುಮಾನ ಮೂಡಿತ್ತು. ನಂತರ ಮನೆ ಕೆಲಸದಾಕೆಯನ್ನು ವಿಚಾರಿಸಿದಾಗ ಸಾವಿನ ಸತ್ಯ ಹೊರಬಿದ್ದಿದೆ. ಇದನ್ನೂ ಓದಿ: ಕಿವಿಯೋಲೆಗಾಗಿ ಪತ್ನಿಯನ್ನೇ ಕೊಂದು ವಾರಣಾಸಿಗೆ ಪರಾರಿಯಾದನವೆಂಬರ್ 16 ರಂದು ಮೊಮ್ಮಗನನ್ನು ಬ್ಯಾಡ್ಮಿಂಟನ್ ಕ್ಲಾಸ್‍ಗೆ ಕರೆದುಕೊಂಡು ಹೋಗಿದ್ದ ವೃದ್ಧ ಬಾಲಸುಬ್ರಮಣಿಯನ್ ಅಲ್ಲಿಂದ ಮನೆ ಕೆಲಸದಾಕೆ ಮನೆಗೆ ಹೋಗಿದ್ದರು. ಅಲ್ಲಿ ಕೆಲಸದಾಕೆ ಜೊತೆಗೆ ಲೈಂಗಿಕ ಕ್ರಿಯೆ ನಡೆಸುವಾಗ ಹೃದಯಾಘಾತ ಸಂಭವಿಸಿದೆ. ಬಾಲಸುಬ್ರಮಣಿಯನ್ ಹೃದಯಾಘಾತದಿಂದ ಸಾವನ್ನಪ್ಪಿದಾಗ ಮನೆಕೆಲಸದಾಕೆ ತನ್ನ ಗಂಡನಿಗೆ ಈ ಬಗ್ಗೆ ಮಾಹಿತಿ ನೀಡಿದ್ದಳು. ನಂತರ ಮನೆಗೆ ಬಂದ ಗಂಡ ಮತ್ತು ಸಹೋದರ ಸೇರಿ ಸುಬ್ರಮಣಿಯನ್ ಮೃತದೇಹವನ್ನು ಪ್ಲಾಸ್ಟಿಕ್‌ ಬ್ಯಾಗ್‍ನಲ್ಲಿ ಕಟ್ಟಿ ರಸ್ತೆ ಮಧ್ಯೆ ತೆಗೆದುಕೊಂಡು ಹೋಗಿ ಬಿಸಾಡಿದ್ದರು. ಇದನ್ನೂ ಓದಿ: ಅಫ್ತಾಬ್ ನನ್ನನ್ನು ಕೊಂದು ಪೀಸ್ ಪೀಸ್ ಮಾಡ್ತಾನೆ – 2 ವರ್ಷದ ಹಿಂದೆಯೇ ಪೊಲೀಸರಿಗೆ ಪತ್ರ ಬರೆದಿದ್ದ ಶ್ರದ್ಧಾಈ ಬಗ್ಗೆ ಪೊಲೀಸ್ ವಿಚಾರಣೆ ವೇಳೆ ಮನೆ ಕೆಲಸದಾಕೆ ತಪ್ಪೊಪ್ಪಿಕೊಂಡಿದ್ದು, ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ ಸಾವು ಆಯ್ತು. ನಮ್ಮ ಮನೆಯಲ್ಲೇ ಮೃತಪಟ್ಟಿದ್ದು, ಕೊಲೆ ಪ್ರಕರಣದಲ್ಲಿ ಪೊಲೀಸರು ಬಂಧಿಸುತ್ತಾರೆ ಅಂತ ಹೀಗೆ ಮಾಡಿದ್ದೇವೆ ಅಂತ ಹೇಳಿಕೆ ನೀಡಿದ್ದಾಳೆ.
Sign in to your account
Username or Email Address


Password

 Remember Me


