ಕನ್ನಡದ `ಕಾಂತಾರ’ (Kantara Film)  ಸಿನಿಮಾ ವಿಶ್ವದ ಎಲ್ಲೆಡೆ ಭರ್ಜರಿ ಕಲೆಕ್ಷನ್ ಮಾಡಿ, 400 ಕೋಟಿ ರೂ. ಗಲ್ಲಾಪೆಟ್ಟಿಗೆಯಲ್ಲಿ ಕೊಳ್ಳೆ ಹೊಡೆದಿದೆ. ಸಿನಿಮಾ ಅಭೂತಪೂರ್ವ ಯಶಸ್ಸು ಕಂಡಿರುವ ಖುಷಿಯಲ್ಲಿ ಚಿತ್ರತಂಡ ಸಕ್ಸಸ್ ಸೆಲೆಬ್ರೇಷನ್ ಮಾಡಿದೆ. ಈ ಕುರಿತ ಫೋಟೋ ಎಲ್ಲೆಡೆ ಸದ್ದು ಮಾಡುತ್ತಿದೆ.ಚಿತ್ರರಂಗದಲ್ಲಿ `ಕೆಜಿಎಫ್ 2′ (Kgf 2) ನಂತರ ಹೊಸ ಅಲೆ ಎಬ್ಬಿಸಿದ ಸಿನಿಮಾ ಅಂದ್ರೆ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ `ಕಾಂತಾರ’ ಚಿತ್ರವನ್ನು ಕನ್ನಡ ಚಿತ್ರರಂಗ ಮಾತ್ರವಲ್ಲದೇ ಪರಭಾಷೆಯ ಸ್ಟಾರ್ಸ್ ಮತ್ತು ಸಿನಿಪ್ರೇಕ್ಷಕರು ಶ್ಲಾಘಿಸಿದ್ದರು. ಒಟ್ಟು 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ, ಈಗ ಒಟಿಟಿಯಲ್ಲಿ ಸಿನಿಮಾ ಲಗ್ಗೆ ಇಟ್ಟಿದೆ. ಈಗ `ಕಾಂತಾರ’ ಟೀಮ್ ಮತ್ತೆ ಒಟ್ಟಿಗೆ ಸೇರಿ ಚಿತ್ರದ ಯಶಸ್ಸು ಸಂಭ್ರಮಿಸಿದೆ.ಸಕ್ಸಸ್ ಸಂಭ್ರಮದಲ್ಲಿ ಹೊಂಬಾಳೆ ಸಂಸ್ಥೆಯ(Hombale Films)  ರೂವಾರಿ ವಿಜಯ್ ಕಿರಗಂದೂರು, ರಿಷಬ್ ದಂಪತಿ ಮತ್ತು ನಾಯಕಿ ಸಪ್ತಮಿ ಗೌಡ, ಪ್ರಮೋದ್‌ ಶೆಟ್ಟಿ, ಜತೆ ಇಡೀ ಚಿತ್ರತಂಡ ಸಾಕ್ಷಿಯಾಗಿತ್ತು. ಇದರ ನಡುವೆ ಮಲಯಾಳಂ ಸ್ಟಾರ್ ಫಯಾದ್ ಫಾಸಿಲ್ ಕೂಡ ಹಾಜರ್ ಆಗಿದ್ದರು. ಸದ್ಯ ಈ ಸಂಭ್ರಮದ ಕ್ಷಣಗಳ ಫೋಟೋ ಎಲ್ಲೆಡೆ ಸದ್ದು ಮಾಡ್ತಿದೆ. ಇದನ್ನೂ ಓದಿ: ಅಥಿಯಾ ಶೆಟ್ಟಿ -ಕೆ.ಎಲ್ ರಾಹುಲ್ ಮದುವೆ ಬಗ್ಗೆ ಸುನೀಲ್ ಶೆಟ್ಟಿ ಸ್ಪಷ್ಟನೆ ಐವತ್ತು ದಿನಗಳನ್ನು ಪೂರೈಸಿ, ಯಶಸ್ಸಿಯಾಗಿ ಮುನ್ನುಗ್ಗುತ್ತಿರುವ ‌ʻಕಾಂತಾರʼ ಸಿನಿಮಾ ಈವರೆಗೂ 400 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಕರ್ನಾಟಕವೊಂದರಲ್ಲೇ 170 ಕೋಟಿಗೂ ಅಧಿಕ ಹಣ ಬಾಕ್ಸ್ ಆಫೀಸಿಗೆ ಹರಿದು ಬಂದಿದೆ ಎಂದು ಹೇಳಲಾಗುತ್ತಿದೆ. ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ವಿದೇಶದಿಂದ ಬಂದ ಹಣವನ್ನು ಒಟ್ಟಾಗಿಸಿದರೆ ಸಿನಿಮಾದ ಒಟ್ಟು ಗಳಿಕೆ 400 ಕೋಟಿ ಎಂದು ಅಂದಾಜಿಸಲಾಗಿದೆ. ಹಾಗಾಗಿ ಕಡಿಮೆ ಬಜೆಟ್ ನಲ್ಲಿ ತಯಾರಾದ ಸಿನಿಮಾ ಈ ಪ್ರಮಾಣದಲ್ಲಿ ಗಳಿಕೆ ಮಾಡಿದ್ದು ಒಂದು ರೀತಿಯಲ್ಲಿ ದಾಖಲೆ ಎಂದೇ ಬಣ್ಣಿಸಲಾಗುತ್ತಿದೆ.
Sign in to your account
Username or Email Address


Password

 Remember Me


