ಬಿಗ್ ಬಾಸ್ (Bigg Boss) ಸ್ಪರ್ಧಿ ಸಾನ್ಯ ಅಯ್ಯರ್ (Sanya Iyer), ದೊಡ್ಮನೆಯಿಂದ ಆರನೇ ವಾರಕ್ಕೆ ಎಲಿಮಿನೇಟ್ ಆಗಿ ಹೊರಬಂದಿದ್ದರು. ಮನೆಯಿಂದ ಹೊರಬಂದ ಮೇಲೆ ಇದೀಗ ಲೈವ್‌ ಬಂದಿದ್ದಾರೆ. ಈ ವೇಳೆ ಸಾನ್ಯರನ್ನ ಫ್ಯಾನ್ಸ್ ಯಾವಾಗ ಮಂಗಳೂರಿಗೆ ಬರುತ್ತೀರಾ ಎಂದು ಕೇಳಿದ್ದಾರೆ. ಅದಕ್ಕೆ ನಟಿ ಪ್ರತಿಕ್ರಿಯಿಸಿದ್ದಾರೆ.ದೊಡ್ಮನೆಯ ಪ್ರೇಮ ಪಕ್ಷಿಗಳಾಗಿ ಗುರುತಿಸಿಕೊಂಡಿದ್ದ ರೂಪೇಶ್ ಶೆಟ್ಟಿ(Roopesh Shetty) ಮತ್ತು ಸಾನ್ಯ ಅಯ್ಯರ್ (Sanya Iyer) ದೂರ ದೂರ ಆಗಿದ್ದಾರೆ. ಮನೆಯಲ್ಲಿ ಇಬ್ಬರು ಒಟ್ಟಿಗೆ ಇದ್ದಷ್ಟು ದಿನ ಒಬ್ಬರಿಗೊಬ್ಬರು ಸಾಥ್‌ ನೀಡುತ್ತಿದ್ದರು. ಈಗ ಮನೆಯಿಂದ ಹೊರಬಂದಿರುವ ಸಾನ್ಯ, ದೂರದಿಂದಲೇ ರೂಪೇಶ್ ಆಟಕ್ಕೆ ಬೆಂಬಲ ಕೊಡುತ್ತಿದ್ದಾರೆ. ಇತ್ತೀಚೆಗೆ ತಮ್ಮ ಖಾಸಗಿ ಪೇಜ್‌ನಲ್ಲಿ ಲೈವ್‌ಗೆ ಬಂದ ವೇಳೆ ಮಂಗಳೂರಿನತ್ತ ಬರುವ ಬಗ್ಗೆ ಪುಟ್ಟಗೌರಿಗೆ ಅಭಿಮಾನಿಯೊಬ್ಬ ಪ್ರಶ್ನಿಸಿದ್ದಾರೆ. ಇದನ್ನೂ ಓದಿ:ಮೊದಲ ಬಾರಿಗೆ ಮುದ್ದು ಮಗಳ ಫೋಟೋ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾರೂಪೇಶ್ ಶೆಟ್ಟಿ, ಬಿಗ್ ಬಾಸ್ ಗೆದ್ದು ಬರಲಿ. ಅವರು ಖಂಡಿತಾ ಗೆಲ್ಲುತ್ತಾರೆ. ನಾನು ಕೂಡ ಕೊರಗಜ್ಜನ(Koragajja) ಸನ್ನಿಧಿಗೆ ಬರಬೇಕು. ರೂಪು, ಹೊರ ಬಂದ ಮೇಲೆ ನಾನು ಮಂಗಳೂರಿಗೆ(Mangalore) ರೂಪೇಶ್ ಜೊತೆಗೆ ಬರುತ್ತೇನೆ ಎಂದು ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿದ್ದಾರೆ.ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಇದೀಗ ಒಳ್ಳೆಯ ಸ್ಕ್ರಿಪ್ಟ್‌ಗಳು ಸಾನ್ಯಗೆ ಅರಸಿ ಬರುತ್ತಿದೆ. ಸೂಕ್ತ ಕಥೆಯೊಂದಿಗೆ ಸಿನಿಮಾ ಮಾಡುವುದಾಗಿ ಸಾನ್ಯ ಈ ವೇಳೆ ತಿಳಿಸಿದ್ದಾರೆ.
Sign in to your account
Username or Email Address


Password

 Remember Me


