ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಶೃಂಗೇರಿ ಕ್ಷೇತ್ರವ್ಯಾಪ್ತಿಯಲ್ಲಿನ 300ಕ್ಕೂ ಅಧಿಕ ಕಾರ್ಯಕರ್ತರು ಏಕಾ-ಏಕಿ ಕಾಂಗ್ರೆಸ್ (Congress) ತೊರೆದು ಬಿಜೆಪಿ (BJP) ಸೇರ್ಪಡೆಗೊಂಡಿದ್ದಾರೆ.ಇದರಿಂದ ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡಗೆ (TD Rajegowda) ಸ್ವ-ಹೋಬಳಿಯಲ್ಲೇ ಶಾಕ್ ಕೊಟ್ಟಂತಾಗಿದೆ. ಶಾಸಕನ ವರ್ತನೆಯಿಂದ 300ಕ್ಕೂ ಅಧಿಕ ಕಾರ್ಯಕರ್ತರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಇದನ್ನೂ ಓದಿ: ವರದಕ್ಷಿಣೆಗಾಗಿ ಮದುವೆಯಾಗಿ ಹಣ ಸಿಕ್ದ ಮೇಲೆ ಮಹಿಳೆಗೆ ಮೋಸ ಮಾಡಿ ಪರಾರಿಯಾಗ್ತಿದ್ದ ವ್ಯಕ್ತಿ ಅರೆಸ್ಟ್ಎನ್.ಆರ್.ಪುರ ತಾಲೂಕಿನ ಮಹಲ್ಗೋಡು ಗ್ರಾಮದ ಕಾರ್ಯಕರ್ತರು, ಅವರೇ ಶಾಮಿಯಾನ ಹಾಕಿ, ಕಾರ್ಯಕ್ರಮ ಮಾಡಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ರಾಜೇಗೌಡರ ಮೇಲೆ ವಿಶ್ವಾಸವಿಲ್ಲ ಎಂದು ಹೇಳಿ, ಮೀಸಲಾತಿ (Reservation) ಹೆಚ್ಚಿಸಿದ ಬಿಜೆಪಿಗೆ ಜಿಂದಾಬಾದ್ ಕೂಗಿ ಜೈಕಾರ ಹಾಕಿದ್ದಾರೆ. ಇದನ್ನೂ ಓದಿ: ಶಾರೀಕ್‌ ಬಳಿಯಿದ್ದ ಕುಕ್ಕರ್‌ ಬಾಂಬ್‌ಗೆ ಬಸ್ಸನ್ನೇ ಸ್ಫೋಟಿಸುವ ಸಾಮರ್ಥ್ಯ ಇತ್ತುನೂತನ ಕಾರ್ಯಕರ್ತರನ್ನು ಬಿಜೆಪಿ ಮಾಜಿ ಸಚಿವ ಜೀವರಾಜ್ ಆತ್ಮೀಯವಾಗಿ ಸ್ವಾಗತಿಸಿದ್ದಾರೆ.
Sign in to your account
Username or Email Address


Password

 Remember Me


