ಬೆಂಗಳೂರು: ನಗರದಲ್ಲಿ ಬಯಲಿಗೆ ಬಂದ ವೋಟರ್‌ಗೇಟ್‌ ಹಗರಣ (Voter ID Scam) ದಿನಕ್ಕೊಂದು ತಿರುವು ಪಡೆಯುತ್ತಿದೆ. ನಟೋರಿಯಸ್ ಚಿಲುಮೆ ಸಂಸ್ಥೆಯ ಸಿಬ್ಬಂದಿ ಒಬ್ಬೊಬ್ಬರಾಗಿ ಅಂದರ್ ಆಗುತ್ತಿದ್ದಾರೆ. ಇದೀಗ ಮುಖ್ಯ ಆರೋಪಿ ರವಿಕುಮಾರ್ ಆಪ್ತ ಲೋಕೇಶ್‌ನನ್ನು (Lokesh) ಪೊಲೀಸರು ಬಂಧಿಸಿದ್ದಾರೆ.ಚಿಲುಮೆ (Chilume) ಸಂಸ್ಥೆಯಿಂದ ಮತದಾರರ ದತ್ತಾಂಶ ಕಳವು ಪ್ರಕರಣದಲ್ಲಿ ಲೊಕೇಶ್ ಎರಡನೇ ಆರೋಪಿ ಆಗಿದ್ದು, ಕೇಸ್ ದಾಖಲಾದ ಬಳಿಕ ನಾಪತ್ತೆಯಾಗಿದ್ದ. ಇಂದು ಹಲಸೂರು ಗೇಟ್ ಪೊಲೀಸರು ಲೋಕೇಶ್‌ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ವೋಟರ್‌ಗೇಟ್‌ ಹಗರಣಕ್ಕೆ ಅಡ್ಡ ಆಗಿತ್ತಾ ಪ್ರಭಾವಿ ಶಾಸಕರ ಕಚೇರಿ?ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ, ಪ್ರಕರಣ ಸಂಬಂಧ ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದೀವಿ. ಕಾಡುಗೋಡಿ ಮತ್ತು ಹಲಸೂರ್ ಗೇಟ್‍ನಲ್ಲಿ ದಾಖಲಾದ ಎರಡೂ ಎಫ್‍ಐಆರ್‌ನಲ್ಲಿ (FRI) ಲೋಕೇಶ್ ಹೆಸರು ಉಲ್ಲೇಖ ಆಗಿತ್ತು. ಲೋಕೇಶ್‍ನನ್ನು ಬಂಧಿಸಿ ಒಂದು ರೌಂಡ್ ವಿಚಾರಣೆ ಮಾಡಲಾಗಿದೆ. ಹೆಚ್ಚಿನ ವಿಚಾರಣೆ ಮಾಡಲಾಗ್ತಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮಾನ, ಮರ್ಯಾದೆ ಇದ್ದರೆ ಡಿಕೆಶಿ ರಾಜೀನಾಮೆ ನೀಡಲಿ: ಈಶ್ವರಪ್ಪಪ್ರಕರಣದ ಪ್ರಮುಖ ಆರೋಪಿ ಬಂಧಿತ ಕಿಂಗ್‍ಪಿನ್ ರವಿಕುಮಾರ್ ವಿಚಾರಣೆ ತೀವ್ರಗೊಂಡಿದೆ. ಚಿಲುಮೆಯ ಕೆಂಪೇಗೌಡ, ಧರ್ಮೇಶ್‍ನನ್ನು ಸ್ಥಳಕ್ಕೆ ಕರೆದೊಯ್ದು ಸ್ಥಳ ಮಹಜರು ನಡೆಸಿವೆ. ಈ ವೇಳೆ, ಬಿಬಿಎಂಪಿ ಅಧಿಕಾರಿಗಳು ಹಾಗೂ ಚಿಲುಮೆ ಸಂಸ್ಥೆಯ ಕರಾರು ಪತ್ರಗಳು ಲಭ್ಯವಾಗಿವೆ. ಆರ್‌ಓಗಳ ಮೂಲಕವೇ ಮತಪಟ್ಟಿ ಪರಿಷ್ಕರಣೆಯಲ್ಲಿ ಚಿಲುಮೆ ಕೈಯಾಡಿಸಿರುವ ಶಂಕೆ ವ್ಯಕ್ತವಾಗುತ್ತಿದೆ. ಚಿಲುಮೆ ಮಾಹಿತಿ ಆಧರಿಸಿಯೇ ಆರ್‌ಓಗಳು ಮತದಾರರ ಹೆಸರುಗಳನ್ನು ಡಿಲೀಟ್ ಮಾಡಿದ್ರಾ ಎಂಬ ಪ್ರಶ್ನೆ ಎದ್ದಿದೆ. ಆದ್ರೂ ಈವರೆಗೂ ಕೇವಲ ಮೂವರು ಆರ್‌ಓಗಳನ್ನು ಸಸ್ಪೆಂಡ್ ಅಷ್ಟೇ ಮಾಡಲಾಗಿದೆ. ಅವರನ್ನು ಬಂಧಿಸಿ ವಿಚಾರಣೆ ನಡೆಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಬಿಎಲ್‍ಓ ಕಾರ್ಡ್ ಮಾಡಿಕೊಡದ ಆರ್‌ಓಗಳ ಮೇಲೆ ಸ್ಥಳೀಯ ಕಾರ್ಪೋರೇಟರ್‌ಗಳು ಮತ್ತು ಶಾಸಕರಿಂದ ಒತ್ತಡ ಹಾಕಿಸ್ತಿದ್ವಿ ಎಂಬ ವಿಚಾರವನ್ನು ರವಿಕುಮಾರ್ ವಿಚಾರಣೆ ವೇಳೆ ತಿಳಿದುಬಂದಿದೆ. ಬರೀ ಶಾಸಕರಷ್ಟೇ ಅಲ್ಲ, ಕಾರ್ಪೋರೆಷನ್ ಚುನಾವಣೆಗೆ ನಿಲ್ಲಲು ಬಯಸಿದ್ದ ಹಲವು ರಾಜಕಾರಣಿಗಳು ಕೂಡ ಚಿಲುಮೆಯಿಂದ ಮತ ಮಾಹಿತಿ ಖರೀದಿ ಮಾಡ್ತಿದ್ವು ಎಂಬ ಸ್ಫೋಟಕ ಸತ್ಯ ಬಯಲಾಗಿದೆ.
Sign in to your account
Username or Email Address


Password

 Remember Me


