ಮಂಗಳೂರು: ನಗರದಲ್ಲಿ ಭಾನುವಾರ ನಡೆದ ಕುಕ್ಕರ್ ಬಾಂಬ್‍ (Cooker Bomb) ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸೂಸೈಡ್ ಬಾಂಬರ್ ಆಗಿದ್ದ ಉಗ್ರ ಶಾರೀಕ್ ತನ್ನನ್ನು ತಾನೇ ಸ್ಫೋಟಿಸಿಕೊಂಡು ವಿಧ್ವಂಸಕ ಕೃತ್ಯಕ್ಕೆ ಯತ್ನಿಸಿದ್ದಾನೆ. ಜನನಿಬಿಡ ಪಂಪ್‍ವೆಲ್‍ (PumpWel) ನಲ್ಲಿ `ಆತ್ಮಾಹುತಿ ದಾಳಿ’ಗೆ ಸಂಚು ರೂಪಿಸಿದ್ದ ಎಂಬ ಮಾಹಿತಿ ಪಬ್ಲಿಕ್ ಟಿಗೆ ಲಭಿಸಿದೆ.ಬ್ಲಾಸ್ಟ್‍ಗೂ ಮುನ್ನ ನಾಗುರಿಯಲ್ಲಿರುವ ವೈನ್‍ಶಾಪ್‍ವೊಂದರಲ್ಲಿ ಶಾರೀಕ್ ಮದ್ಯ (Alcohol) ಖರೀದಿಸಿದ್ದ. ವೈನ್ ಶಾಪ್ ಬಳಿ ಶಾರೀಕ್ ಜೊತೆ ಇನ್ನೊಬ್ಬನೂ ಇದ್ದ. ಶಾರೀಕ್ ಒಂದರ ಮೇಲೊಂದು 3 ಶರ್ಟ್ ಹಾಕಿದ್ದನು. ಇತ್ತ ಕುಕ್ಕರ್ ಬಾಂಬ್ ಜೊತೆ ಶಾರೀಕ್ ಪಂಪ್‍ವೆಲ್ ಕಡೆ ಹೊರಟಿದ್ದ. ಆದರೆ ಆಕಸ್ಮಿಕವಾಗಿ ದಾರಿ ಮಧ್ಯೆಯೇ ಸ್ಫೋಟಗೊಂಡು ವಿಚಲಿತಗೊಂಡನು. ಅಲ್ಲದೆ ತನ್ನ ಕೃತ್ಯ ಸಫಲ ಆಗದಿರೋದಕ್ಕೆ ಚಡಪಡಿಸಿದ್ದನು. ಇದನ್ನೂ ಓದಿ: ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ- ISIS ಉಗ್ರ ಪರ ಗೋಡೆ ಬರಹ ಬರೆದಿದ್ದ ಆರೋಪಿಯಿಂದ ಕೃತ್ಯಶಾರೀಕ್ ಯಾರು..? ಮಂಗಳೂರಿನಲ್ಲಿ ಉಗ್ರರ ಪರ ಗೋಡೆ ಬರಹ ಬರೆದಿದ್ದ ಶಾರೀಕ್, ಶಿವಮೊಗ್ಗ ಗಲಭೆಯಲ್ಲೂ ಈತನ ಹೆಸರು ಕೇಳಿ ಬಂದಿದ್ದರಿಂದ ಎನ್‍ಐಎ (NIA) ಈತನಿಗಾಗಿ ಹುಡುಕಾಟ ನಡೆಸಿತ್ತು. ಹೀಗಾಗಿ ಎನ್‍ಐಎ ಗೆ ಸಿಕ್ಕಿ ಬೀಳೋದಕ್ಕಿಂತಲೂ `ಸೂಸೈಡ್ ಬಾಂಬರ್’ ಆಗಲು ನಿರ್ಧಾರ ಮಾಡಿದ್ದನು. ಇದೇ ಕಾರಣಕ್ಕೆ ಮಂಗಳೂರು ಬ್ಲಾಸ್ಟ್ ಗೆ ಪ್ಲಾನ್ ಮಾಡಿದ್ದ ಶಾರೀಕ್, ಇದಕ್ಕೂ ಮುನ್ನ ಹಲವೆಡೆ ಪ್ರಯೋಗಿಕ ಬಾಂಬ್ ಬ್ಲಾಸ್ಟ್ ಮಾಡಿದ್ದ ಎಂಬ ಮಾಹಿತಿ ಲಭಿಸಿದೆ.
Sign in to your account
Username or Email Address


Password

 Remember Me


