ಪುನೀತ್ ರಾಜ್‌ಕುಮಾರ್(Puneeth Rajkumar) ನಟನೆಯ `ಗಂಧದ ಗುಡಿ’ (Gandadagudi) ಸಿನಿಮಾ ಅಕ್ಟೋಬರ್ 28ಕ್ಕೆ ತೆರೆಗೆ ಅಪ್ಪಳಿಸಿತ್ತು. ಪುನೀತ್ ಅವರಾಗಿಯೇ ಕಾಣಿಸಿಕೊಂಡಿದ್ದ ಈ ಚಿತ್ರಕ್ಕೆ ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಚಿತ್ರತಂಡ ಜೊತೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಕ್ಸಸ್ ಸಂಭ್ರಮ ಆಚರಿಸಿದ್ದಾರೆ.ಅಮೋಘ ವರ್ಷ (Amogha Varsha) ನಿರ್ದೇಶನದ `ಗಂಧದ ಗುಡಿ’ ವನ್ಯಜೀವಿ ಸಂಕುಲದ ಕಾಡು ಮೇಡಿನ ಚಿತ್ರಣವನ್ನ ತೆರೆಯ ಮೇಲೆ ತೋರಿಸಲಾಗಿತ್ತು. ಅಪ್ಪು ನೈಜ ನಟನೆಗೆ ಫ್ಯಾನ್ಸ್ ಫಿದಾ ಆಗಿದ್ದರು. ಅಪ್ಪು ಸಹಜ ನಟನೆ ಜೊತೆ ಸೊಗಸಾದ ಹಸಿರಿನ ಕಥೆಗೆ ಚಿತ್ರಮಂದಿರದಲ್ಲಿ ಸಕ್ಸಸ್‌ಫುಲ್ ಪ್ರದರ್ಶನ ಕಂಡಿತ್ತು. ಇದನ್ನೂ ಓದಿ:`ಜೈಲರ್’ ಚಿತ್ರದ ಸೆಟ್‌ನಲ್ಲಿ ಶಿವಣ್ಣನನ್ನು ಭೇಟಿಯಾದ ಶಿವಕಾರ್ತಿಕೇಯನ್  A post shared by Santhosh Ananddram (@santhosh_ananddram)ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಚಿತ್ರತಂಡದ ಜೊತೆಗೆ `ಗಂಧದ ಗುಡಿ’ ಸಕ್ಸಸ್ ಸೆಲೆಬ್ರೇಷನ್ ಮಾಡಿದ್ದಾರೆ. ಕ್ವಿನ್ಸ್ ರೋಡ್‌ನಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ತಂಡ ಕೇಕ್ ಕಟ್ ಮಾಡಿ ಖುಷಿಪಟ್ಟಿದೆ. ನಿರ್ದೇಶಕ ಸಂತೋಷ್ ಆನಂದ್‌ರಾಮ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಪುತ್ರ ಯುವರಾಜ್‌ಕುಮಾರ್ ಸಾಥ್ ಕೊಟ್ಟಿದ್ದಾರೆ. ಸಕ್ಸಸ್ ಸೆಲೆಬ್ರೇಷನ್‌ಗೆ ಸಂಬAಧಿಸಿದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Sign in to your account
Username or Email Address


Password

 Remember Me


