ನಟಿ ಮಾನುಷಿ ಚಿಲ್ಲರ್(Manushi Chillar) ಸಿನಿಮಾಗಿಂತ ತಮ್ಮ ಖಾಸಗಿ ವಿಚಾರವಾಗಿ ಸಖತ್ ಸುದ್ದಿಯಲ್ಲಿದ್ದಾರೆ. ಬಿಟೌನ್‌ನಲ್ಲಿ ಸದ್ಯ ಮಾನುಷಿ ಡೇಟಿಂಗ್ ಸುದ್ದಿಯೇ ಸಖತ್ ಸದ್ದು ಮಾಡುತ್ತಿದೆ. ಉದ್ಯಮಿ, Zerodha ಕಂಪನಿಯ ಸಹ ಸಂಸ್ಥಾಪಕ ನಿಖಿಲ್ ಕಾಮತ್ (Nikhil Kamath) ಜೊತೆ ಮಾನುಷಿ ಎಂಗೇಜ್ ಆಗಿದ್ದಾರೆ.ಅಕ್ಷಯ್ ಕುಮಾರ್(Akshay Kumar) ನಟನೆಯ `ಸಾಮ್ರಾಟ್ ಪೃಥ್ವಿರಾಜ್’ (Samrat Prithviraj) ಚಿತ್ರದಲ್ಲಿ ಮಾನುಷಿ ನಾಯಕಿಯಾಗಿ ನಟಿಸಿದ್ದರು. ಬಳಿಕ ಇದೀಗ ಸಾಕಷ್ಟು ಚಿತ್ರಗಳ ಆಫರ್ಸ್ ಅರಸಿ ಬರುತ್ತಿದೆ. ಇದರ ಮಧ್ಯೆ ಮಾನುಷಿ ಇದೀಗ ಬೆಂಗಳೂರಿನ ಉದ್ಯಮಿ(Bengaluru Based Businessman) ನಿಖಿಲ್ ಕಾಮತ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಸದ್ದು ಮಾಡುತ್ತಿದೆ. ಇಬ್ಬರು ಒಬ್ಬರನೊಬ್ಬರು ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.ಇತ್ತೀಚೆಗಷ್ಟೇ ಈ ಜೋಡಿ, ರಿಷಿಕೇಶಕ್ಕೆ ಒಟ್ಟಿಗೆ ಹೋಗಿದ್ದರು. ಇಬ್ಬರೂ ಒಟ್ಟಿಗೆ ನೆಲೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಎಂಗೇಜ್ ಆಗಿರುವ ಬಗ್ಗೆ ಇಬ್ಬರೂ ಎಲ್ಲೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಮೂಲಗಳ ಪ್ರಕಾರ, ಸದ್ಯದಲ್ಲೇ ಈ ಜೋಡಿ ಹಸೆಮಣೆ ಏರಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಇದನ್ನೂ ಓದಿ:ʻಗಟ್ಟಿಮೇಳʼ ನಟಿ ಜೊತೆ ಎಂಗೇಜ್‌ಮೆಂಟ್‌ ಮಾಡಿಕೊಂಡ ಸಿದ್ದು ಮೂಲಿಮನಿ  A post shared by Nikhil Kamath (@nikhilkamathcio)ಬೆಂಗಳೂರಿನ ಮೂಲದ ಬ್ಯುಸಿನೆಸ್ ಮ್ಯಾನ್ ಆಗಿರುವ ನಿಖಿಲ್ ಕಾಮತ್‌ಗೆ ಈ ಹಿಂದೆಯೇ ಒಂದು ಮದುವೆ ಆಗಿತ್ತು. 2019ರ ವೇಳೆ ಇಟಲಿಯಲ್ಲಿ ಅಮಂಡಾ ಪುರವಂಕರ ಜೊತೆ ವಿವಾಹವಾಗಿದ್ದರು. ಬಳಿಕ ವೈಯಕ್ತಿಕ ಕಾರಣಗಳಿಂದ 2021ರಲ್ಲಿ ಡಿವೋರ್ಸ್ ಪಡೆದರು. ಇದೀಗ ನಟಿ ಮಾನುಷಿ ಜೊತೆ ನಿಖಿಲ್ ಕಾಮತ್ ಎಂಗೇಜ್ ಆಗಿದ್ದಾರೆ.40 ವರ್ಷ ಮತ್ತು ಅದಕ್ಕಿಂತ ಚಿಕ್ಕ ವಯಸ್ಸಿನ ಹುರುನ್‌ ಸೆಲ್ಫ್‌ಮೇಡ್‌ ಶ್ರೀಮಂತರ ಪಟ್ಟಿ-2022 ಬಿಡುಗಡೆಯಾಗಿದ್ದು ಇದರಲ್ಲಿ 36 ವರ್ಷದ ನಿಖಿಲ್‌ ಅವರು 17,500 ಕೋಟಿ ರೂ. ಸಂಪತ್ತನ್ನು ಹೊಂದಿದ್ದಾರೆ.
Sign in to your account
Username or Email Address


Password

 Remember Me


