ಬೆಂಗಳೂರು: ಮತದಾರರ ಮಾಹಿತಿ ಕಳವು (Voter Data Theft) ಪ್ರಕರಣ ಸಂಬಂಧ ಪೊಲೀಸರ (Police) ತನಿಖೆ ತೀವ್ರಗೊಂಡಿದೆ. ಒಬ್ಬೊಬ್ಬರೇ ಆರೋಪಿಗಳು ಖಾಕಿ ಬಲೆಗೆ ಬೀಳುತ್ತಿದ್ದು, ಇದೀಗ ಪ್ರಕರಣದ ಪ್ರಮುಖ ಆರೋಪಿ ರವಿಕುಮಾರ್‌ನನ್ನು (Ravikumar) ಪೊಲೀಸರು ಬಂಧಿಸಿದ್ದಾರೆ.ಈಗಾಗಲೇ ನಾಲ್ವರನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಇದೀಗ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಹಲಸೂರು ಗೇಟ್ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸರಿಂದ ರೇಣುಕಪ್ರಸಾದ್, ಧರ್ಮೇಶ್ ಬೆನ್ನಲ್ಲೇ ಕಂಪನಿ ನಿರ್ದೇಶಕರಾದ ಕೆಂಪೇಗೌಡ, ಐಶ್ವರ್ಯರನ್ನು ಪೊಲೀಸ್ರು ಬಂಧಿಸಿದ್ರು. ಇಂದು ಡಿಜಿಟಲ್ ಸಮೀಕ್ಷಾ ಆ್ಯಪ್ ಡೆವಲಪ್ ಮಾಡಿದ್ದ ಸಂಜೀವ್ ಶೆಟ್ಟಿ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಉಗ್ರರ ಅಡಗುತಾಣವಾಗ್ತಿದ್ಯಾ ಮಂಗಳೂರು – ಕರಾವಳಿ ಜಿಲ್ಲೆಯಾದ್ಯಂತ ಹೈ ಅಲರ್ಟ್ಡಿಜಿಟಲ್ ಸಮೀಕ್ಷಾ ಆ್ಯಪ್ ಶೋಧಿಸುವ ಕೆಲಸಕ್ಕೆ ಪೊಲೀಸರು ಮುಂದಾಗಿದ್ದಾರೆ. ಮತ್ತೊಂದು ಕಡೆ ವಿವಿಧ ತಂಡಗಳಾಗಿ ಪೊಲೀಸರು ಹಲವೆಡೆ ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನು ಕಲೆಹಾಕ್ತಿದ್ದಾರೆ. ಇಲ್ಲಿವರೆಗೂ ಚಿಲುಮೆ ಸಂಸ್ಥೆಯಿಂದ ಯಾರಿಗೆಲ್ಲಾ ಲಾಭವಾಗಿದೆ, ಯಾರೆಲ್ಲಾ ರಾಜಕೀಯ ಮುಖಂಡರು, ಅಧಿಕಾರಿಗಳು ಇದಕ್ಕೆ ಕೈ ಜೋಡಿಸಿದ್ದಾರೆ ಅನ್ನೋದ್ರ ಮಾಹಿತಿಯನ್ನು ಪೊಲೀಸ್ರು ಹೆಕ್ಕುತ್ತಿದ್ದಾರೆ. ಏಳಕ್ಕೂ ಹೆಚ್ಚು ಕ್ಷೇತ್ರಗಳ ಮತದಾರರ ಮಾಹಿತಿ ಎಗರಿಸಿದ್ದ ಚಿಲುಮೆ, ಸಚಿವರು ಮತ್ತು ಶಾಸಕರಿಗೆ ಮಾರಿಕೊಂಡಿದೆ ಎನ್ನಲಾಗಿದೆ. ಇದನ್ನೂ ಓದಿ: ಕಾಡಾನೆ ದಾಳಿಗೆ ಮಹಿಳೆ ಬಲಿ – ಮೃತದೇಹ ನೋಡಲು ಬಂದ ಶಾಸಕನ ಮೇಲೆ ಗ್ರಾಮಸ್ಥರಿಂದ ಹಲ್ಲೆLive Tv
[brid partner=56869869 player=32851 video=960834 autoplay=true]
Sign in to your account
Username or Email Address


Password

 Remember Me


