ಟಾಲಿವುಡ್‌ನಲ್ಲಿ ಸದ್ಯ ತೆಲುಗಿನ ನಟ ನಾಗ ಶೌರ್ಯ ಮತ್ತು ಕನ್ನಡತಿ ಅನುಷಾ ಶೆಟ್ಟಿ ಅವರದ್ದೇ ಸುದ್ದಿ. ಸೌತ್ ನಟ ನಾಗ್ ಕನ್ನಡದ ಹುಡುಗಿಯನ್ನ ಮದುವೆಯಾಗಿರುವ ಬೆನ್ನಲ್ಲೇ ಮತ್ತೊಂದು ಇಂಟರೆಸ್ಟಿಂಗ್ ಸುದ್ದಿಯೊಂದು ಹೊರಬಿದ್ದಿದೆ. ನಾಗ್ ಪತ್ನಿ ಅನುಷಾ ಕನ್ನಡದ ಹುಡುಗಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಷ್ಯ. ಆದರೆ ಅನುಷಾ ಯಾರ ಸಹೋದರಿ ಎಂಬುದು ಹಲವರಿಗೆ ತಿಳಿದಿಲ್ಲ.ಕನ್ನಡದ ಪ್ರತಿಭಾನ್ವಿತ ನಟ ಕಮ್ ನಿರ್ದೇಶಕ ಅಭಿಷೇಕ್ ಶೆಟ್ಟಿ `ನಮ್ ಗಣಿ ಬಿಕಾಂ ಪಾಸ್’ ಚಿತ್ರದ ಮೂಲಕ ನಟ, ನಿರ್ದೇಶಕನಾಗಿ ಗುರುತಿಸಿಕೊಂಡಿದ್ದರು. ಇತ್ತೀಚೆಗಷ್ಟೇ `ಗಜಾನನ ಗ್ಯಾಂಗ್’ ಸಿನಿಮಾಗೆ ನಿರ್ದೇಶನ ಕೂಡ ಮಾಡಿದ್ದರು. ಸದ್ಯದ ವಿಷ್ಯ, ಅಭಿಷೇಕ್‌ ಅವರ ಅಕ್ಕ ಅನುಷಾ ಶೆಟ್ಟಿ ಜೊತೆ ತೆಲುಗಿನ ನಟ ನಾಗ ಶೌರ್ಯ ಮದುವೆ ನಡೆದಿದೆ.  A post shared by abhishek shetty (@abhishek_shetty_official)ಅಭಿಷೇಕ್ ಶೆಟ್ಟಿ ಮತ್ತು ಅನುಷಾ ಮೂಲತಃ ಕುಂದಾಪುರದವರು. ಇಬ್ಬರು ಒಂದೇ ಕುಟುಂಬದವರು. ಅಭಿಷೇಕ್ ಸಿನಿರಂಗದಲ್ಲಿ ಸುದ್ದಿ ಮಾಡಿದ್ರೆ, ಅನುಷಾ ಶೆಟ್ಟಿ ಇಂಟೀರಿಯರ್ ಡಿಸೈನರ್ ಆಗಿ ಗುರುತಿಸಿಕೊಂಡಿದ್ದಾರೆ. ಅನುಷಾ ಮತ್ತು ನಾಗ್ ಒಬ್ಬರನ್ನೊಬ್ಬರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಕುಟುಂಬಸ್ಥರನ್ನ ಒಪ್ಪಿಸಿ, ಇಂದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ದಕ್ಷಿಣ ಭಾರತದ ಶೈಲಿಯಲ್ಲಿ ನಾಗ್‌, ಅನುಷಾ ವಿವಾಹ ನಡೆದಿದೆ. ಈ ಮೂಲಕ ನಾಗ ಶೌರ್ಯ ಕರ್ನಾಟಕದ ಅಳಿಯ ಆಗಿದ್ದಾರೆ.ಸಹೋದರಿ ಅನುಷಾ ಶೆಟ್ಟಿ ಮದುವೆಯಲ್ಲಿ ನಿರ್ದೇಶಕ ಅಭಿಷೇಕ್ ಶೆಟ್ಟಿ ಮಿಂಚಿದ್ದಾರೆ. ನವಜೋಡಿಗೆ ಶುಭಹಾರೈಸಿ, ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಸದ್ಯ ವೀಡಿಯೋ ಸಖತ್ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಕನ್ನಡತಿ ಅನುಷಾ ಶೆಟ್ಟಿ ಜೊತೆ ಹಸೆಮಣೆ ಏರಿದ ತೆಲುಗು ನಟ ನಾಗಶೌರ್ಯಇನ್ನೂ ಅಭಿಷೇಕ್ ಶೆಟ್ಟಿ ನಿರ್ದೇಶನದ `ಆರಾಮ್ ಅರವಿಂದ್ ಸ್ವಾಮಿ’ ಚಿತ್ರದಲ್ಲಿ ಅನೀಶ್ ತೇಜೇಶ್ವರ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಪ್ರಮುಖ ಅಪ್‌ಡೇಟ್ ಅನ್ನು ಮುಂದಿನ ಡಿಸೆಂಬರ್‌ನಲ್ಲಿ ಚಿತ್ರತಂಡ ಅನೌನ್ಸ್ ಮಾಡಲಿದೆ.
Sign in to your account
Username or Email Address


Password

 Remember Me


