ಕಿರುತೆರೆಯ ನಂಬರ್ ಒನ್ `ಸತ್ಯ'(Sathya Serial) ಸೀರಿಯಲ್ ಹೀರೋ ತಮ್ಮ ಫೀಮೇಲ್ ಫ್ಯಾನ್ಸ್‌ಗೆ ಹಾರ್ಟ್ ಬ್ರೇಕಿಂಗ್ ಸುದ್ದಿಯೊಂದನ್ನ ಕೊಟ್ಟಿದ್ದಾರೆ. `ಸತ್ಯ’ ಧಾರಾವಾಹಿಯ ಅಮುಲ್ ಬೇಬಿಯಾಗಿ ಮಿಂಚ್ತಿರುವ ಸಾಗರ್(Sagar Gowda) ಇಂದು ಬಹುಕಾಲದ ಗೆಳತಿ ಸಿರಿ ರಾಜು(Siri Raju) ಜೊತೆ ನಿಶ್ವಿತಾರ್ಥ ಮಾಡಿಕೊಂಡಿದ್ದಾರೆ. ಸದ್ಯ ಏಂಗೇಜ್‌ಮೆಂಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.  A post shared by Siri ???? (@sirri_raju)`ಸತ್ಯ’ ಧಾರಾವಾಹಿಯಲ್ಲಿ ಕಾರ್ತಿಕ್ ಪಾತ್ರಧಾರಿಯಾಗಿ ಅಪಾರ ಅಭಿಮಾನಿಗಳ ಮನಗೆದ್ದ ನಟ ಸಾಗರ್ ಗೌಡ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಅಮುಲ್ ಬೇಬಿ(Amul Baby) ಎಂದೇ ಫೇಮಸ್ ಆಗಿದ್ದ ನಟ ಇದೀಗ ನಟಿ, ಕಮ್ ಮಾಡೆಲ್ ಸಿರಿ ರಾಜು ಅವರನ್ನು ಮದುವೆಯಾಗುತ್ತಿದ್ದಾರೆ. ಐದು ವರ್ಷಗಳಿಂದ ಸ್ನೇಹಿತರಾಗಿದ್ದ ಈ ಜೋಡಿ ಗುರುಹಿರಿಯರನ್ನ ಒಪ್ಪಿಸಿ ಹೊಸ ಬಾಳಿಗೆ ಕಾಲಿಡುವ ತವಕದಲ್ಲಿದ್ದಾರೆ.ಸಾಕಷ್ಟು ಸಮಯದಿಂದ ಸಾಗರ್ ಮತ್ತು ಸಿರಿ ರಾಜು ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಇದೀಗ ಸೂಕ್ತ ಸಮಯ ಎಂದೇನಿಸಿ ರೊಮ್ಯಾಂಟಿಕ್ ಶೇರ್ ಮಾಡುವ ಮೂಲಕ ತಾವು ದಾಂಪತ್ಯ ಜೀವನಕ್ಕೆ ಕಾಲಿಡುವ ಸುದ್ದಿಯನ್ನ ಇತ್ತೀಚೆಗಷ್ಟೇ ತಿಳಿಸಿದ್ದರು. ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಏಂಗೇಜ್‌ಮೆಂಟ್(Engagement) ಮಾಡಿಕೊಂಡಿದ್ದಾರೆ. ಈ ಸಂಭ್ರಮಕ್ಕೆ ʻಸತ್ಯʼ ಧಾರಾವಾಹಿ ತಂಡ ಕೂಡ ಸಾಕ್ಷಿಯಾಗಿದೆ. ಇದನ್ನೂ ಓದಿ:ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ನಿಕ್ಕಿ ಗಲ್ರಾನಿ ದಂಪತಿಇನ್ನೂ ಸಿರಿ ರಾಜು ಕೂಡ ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಮಾಡೆಲ್ ಆಗಿಯೂ ಗುರುತಿಸಿಕೊಂಡಿದ್ದಾರೆ. ಸದ್ಯ ವಿಜಯ್ ರಾಘವೇಂದ್ರ(Vijay Raghavendra) ಅಭಿನಯದ ಹೊಸ ಚಿತ್ರದಲ್ಲಿ ಸಿರಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಾಗರ್ ಮತ್ತು ಸಿರಿ, ಈ ತಾರಾ ಜೋಡಿ ಹಸೆಮಣೆ ಏರುತ್ತಿರುವ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ನಿಶ್ವಿತಾರ್ಥ ಮಾಡಿಕೊಂಡಿರುವ ಈ ಜೋಡಿಗೆ ಫ್ಯಾನ್ಸ್ ಶುಭಹಾರೈಸಿದ್ದಾರೆ.
Sign in to your account
Username or Email Address


Password

 Remember Me


