ಕನ್ನಡ ಮತ್ತು ತೆಲುಗು ಸಿನಿಮಾಗಳ ಮೂಲಕ ಮೋಡಿ ಮಾಡಿರುವ ನಟಿ ನಿಕ್ಕಿ ಗಲ್ರಾನಿ(Nikki Galrani), ಸದ್ಯ ವೈವಾಹಿಕ ಬದುಕಿನಲ್ಲಿ ಬ್ಯುಸಿಯಾಗಿದ್ದಾರೆ. ನಿಕ್ಕಿ ದಂಪತಿಯ ಬದುಕಲ್ಲಿ ಹೊಸ ಸದಸ್ಯನ ಆಗಮನವಾಗಲಿದೆ ಎನ್ನಲಾಗುತ್ತಿದೆ. ಹೊಸ ಅತಿಥಿಯ ಆಗಮನದ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.  A post shared by Nikki Galrani Pinisetty (@nikkigalrani)ಸಂಜನಾ ಗಲ್ರಾನಿ(Sanjana Galrani) ಸಹೋದರಿ ನಿಕ್ಕಿ ತೆಲುಗಿನ ಸಿನಿಮಾಗಳ ಮೂಲಕ ಸಂಚಲನ ಮೂಡಿಸುತ್ತಿದ್ದಾರೆ. ಕಳೆದ ಮೇನಲ್ಲಿ ಆದಿ ಪಿನಿಸೆಟ್ಟಿ ಜೊತೆ ಹಸೆಮಣೆ ಏರಿದ್ದ ಈ ಚೆಲುವೆ, ವೈವಾಹಿಕ ಬದುಕಲ್ಲಿ ಹಾಯಾಗಿದ್ದಾರೆ. ಸದ್ಯದಲ್ಲಿಯೇ ಈ ಜೋಡಿ ಗುಡ್ ನ್ಯೂಸ್ ಕೊಡುವ ಮುನ್ಸೂಚನೆ ಕೊಟ್ಟಿದ್ದಾರೆ.ಇಬ್ಬರೂ ಸಾಕಷ್ಟು ವರ್ಷಗಳ ಡೇಟಿಂಗ್ ನಂತರ ಗುರುಹಿರಿಯರ ಸಮ್ಮುಖದಲ್ಲಿ ಆದಿ ಮತ್ತು ನಿಕ್ಕಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ವಿವಾಹದ ಕೆಲವೇ ತಿಂಗಳುಗಳ ನಂತರ ನಿಕ್ಕಿ ಪ್ರೆಗ್ನೆಂಟ್ ಆಗಿದ್ದಾರೆ. ಸೂಕ್ತ ಸಮಯದಲ್ಲಿ ಅಧಿಕೃತವಾಗಿ ಫ್ಯಾನ್ಸ್‌ಗೆ ತಿಳಿಸಲಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಕೂಡ ಖುಷಿಪಟ್ಟಿದ್ದಾರೆ.  A post shared by Nikki Galrani Pinisetty (@nikkigalrani)ಇನ್ನೂ ನಿಕ್ಕಿ ಗಲ್ರಾನಿ ಕನ್ನಡ, ತೆಲುಗು, ಮಲಯಾಳಂ ಸೇರಿದಂತೆ ೩೦ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
Sign in to your account
Username or Email Address


Password

 Remember Me


