ಓಟಿಟಿ ಸೀಸನ್‌ನಿಂದ ಟಿವಿ ಬಿಗ್ ಬಾಸ್‌ವರೆಗೆ(Bigg Boss) ರಾಕೇಶ್ ಅಡಿಗ ಸದ್ದು ಮಾಡ್ತಿದ್ದಾರೆ. ಸೋನು ಗೌಡ ನಂತರ ಅಮೂಲ್ಯ ಜೊತೆ ರಾಕೇಶ್ ಅಡಿಗ ಕ್ಲೋಸ್ ಆಗಿದ್ದಾರೆ. ನಿನಗೆ ಏನೇ ಕಷ್ಟ ಇದ್ದರೂ ನನಗೆ ಹೇಳಿಕೋ ಎಂದು ಭರವಸೆ ಕೊಡುವ ಮೂಲಕ ಅಮೂಲ್ಯಗೆ ರಾಕಿ ಸಾಥ್‌ ನೀಡಿದ್ದಾರೆ.ಬಿಗ್ ಬಾಸ್(Bigg Boss) ಓಟಿಟಿಯಲ್ಲಿ ಸೋನು(Sonu Gowda) ಜೊತೆ ರಾಕೇಶ್ ಹೈಲೈಟ್ ಆಗಿದ್ದರು. ಇದೀಗ ಟಿವಿ ಬಿಗ್ ಬಾಸ್‌ನಲ್ಲಿ ಅಮೂಲ್ಯ ಜೊತೆ ರಾಕೇಶ್ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಟಾಸ್ಕ್ ಜೊತೆ ಪ್ರತಿಯೊಂದು ಹಂತದಲ್ಲೂ ಇಬ್ಬರು ಜೊತೆಯಾಗಿದ್ದಾರೆ. ಮನೆಯವರ ನೆನಪಾಗುತ್ತಿದೆ ಎಂದು ಅಮೂಲ್ಯಗೆ ರಾಕೇಶ್ (Rakesh adiga) ಮುದ್ದಾಗಿ ಸಮಾಧಾನ ಮಾಡಿದ್ದಾರೆ.ಮನೆಗೆ ಹೋಗಲೇಬೇಕು ಎಂದೇನಿಸುತ್ತಿದೆ. ಆದರೆ ಏನು ಮಾಡೋಕೆ ಆಗುತ್ತೆ ಎಂದು ಅಮೂಲ್ಯ ಎಂದಿದ್ದಾರೆ. ನಾವೆಲ್ಲ ಲೈಕ್ ಮೈಂಡೆಡ್ ಇರೋದರಿಂದ ಓಕೆ, ನಿನಗೆ ಏನೇ ಬೇಸರ ಇದ್ದರೂ, ಹೇಳೋದ್ದಕ್ಕೆ ಹಿಂಜರಿಯಬೇಡ. ನೀನು ನಮ್ಮ ಮನೆಯಲ್ಲಿ ಒಬ್ಬಳು ಎಂದು ಫೀಲ್ ಆಗುತ್ತೀಯಾ ಎಂದು ಅಮೂಲ್ಯಗೆ ರಾಕೇಶ್ ಹೇಳಿದ್ದಾರೆ. ಇದನ್ನೂ ಓದಿ:ಮತದಾರರ ಪಟ್ಟಿ ವಿವಾದ: ಕೆಜಿಎಫ್ ಸೇಡಿನ ಕಥೆಯೂ ಅಲ್ಲ, ಕಾಂತಾರ ದಂತಕಥೆಯೂ ಅಲ್ಲ ಎಂದ ಸಿದ್ದರಾಮಯ್ಯಇನ್ನೂ ಬಿಗ್ ಬಾಸ್ ಮನೆಯಲ್ಲಿ ಸದಾ ಹೆಣ್ಣು ಮಕ್ಕಳ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುವ ರಾಕೇಶ್ ಅಡಿಗ, ಅಮೂಲ್ಯ ಜೊತೆಗಿನ ಸ್ನೇಹ ಸಖತ್ ಹೈಲೈಟ್ ಆಗುತ್ತಿದೆ.
Sign in to your account
Username or Email Address


Password

 Remember Me


