ಬೆಂಗಳೂರು: ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಚೀಲ ಮತ್ತು ಬೆಡ್‍ಶೀಟ್‍ನಲ್ಲಿ ಸುತ್ತಿದ್ದ ಮೃತದೇಹ ಪತ್ತೆ ಆಗಿದೆ.ಜೆಪಿ ನಗರದ 6ನೇ ಹಂತದ ಸಮೀಪ ಮೃತದೇಹ ಪತ್ತೆ ಆಗಿದ್ದು, 67 ವರ್ಷದ ಬಾಲಸುಬ್ರಮಣಿಯನ್ ಎಂದು ಗುರುತಿಸಲಾಗಿದೆ. ಮಗ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.ಇದೇ ನವೆಂಬರ್ 16ರಂದು ಮೊಮ್ಮಗನನ್ನು ಬ್ಯಾಡ್ಮಿಂಟನ್ (Badminton) ಕ್ಲಾಸ್‍ಗೆ ಕರೆದುಕೊಂಡು ಹೋಗಿದ್ದ ಬಾಲಸುಬ್ರಮಣಿಯನ್ ಸಂಜೆ 4.55ರ ವೇಳೆಗೆ ಸೊಸೆಗೆ ಕರೆ ಮಾಡಿ ಹೊರಗಡೆ ಕೆಲಸ ಇದೆ ಎಂದು ತಿಳಿಸಿದ್ರು. ಬಳಿಕ ಕರೆ ಮಾಡಿದ್ರೆ ಫೋನ್ ಸ್ವಿಚ್ ಆಫ್ ಆಗಿತ್ತು. ಆ ನಂತರ ಮಗ ಠಾಣೆಗೆ ನಾಪತ್ತೆ ದೂರು ದಾಖಲಿಸಿದ್ರು. ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಿಂದ ಪ್ರಯಾಣಿಕನನ್ನು ಹೊರಗೆ ತಳ್ಳಿದ ಟಿಟಿಇ – ಕಾಲು ಕಳೆದುಕೊಂಡ ವ್ಯಕ್ತಿ ಸ್ಥಿತಿ ಗಂಭೀರದೇಹದ ಮೇಲೆ ಯಾವುದೇ ಗಾಯಗಳು ಕಂಡು ಬಂದಿಲ್ಲ. ಸಿಡಿಆರ್ ಪರಿಶೀಲಿಸಿದಾಗ ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ. ಮೃತ ವೃದ್ಧನ ಕಾಲ್ ಹಿಸ್ಟರಿ ಜಾಲಾಡಿದಾಗ ನಿರಂತರವಾಗಿ ಮಹಿಳೆಯೊಬ್ಬರ ಜೊತೆಗೆ ಸಂಪರ್ಕ ಇರುವುದು ಬಯಲಾಗಿದೆ. ಸಾರಕ್ಕಿ ಸಿಗ್ನಲ್ ಬಳಿ ಲಾಸ್ಟ್ ಲೊಕೇಶನ್ ಇದೆ. ಹೀಗಾಗಿ ಆ ಮಹಿಳೆ ಯಾರು ಅನ್ನೋದರ ಕುರಿತು ಖಾಕಿ ಬೆನ್ನು ಬಿದ್ದಿದೆ.ಈ ಸಂಬಂಧ ಪುಟ್ಟೇನಹಳ್ಳಿ ಠಾಣೆ (Puttenahalli Station) ಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Sign in to your account
Username or Email Address


Password

 Remember Me


