ಕನ್ನಡ ಚಿತ್ರರಂಗದ ಬಿಗ್ ಬಜೆಟ್ ಸಿನಿಮಾ `ಸಿಂಧೂರ ಲಕ್ಷ್ಮಣ'(Sindhura Lakshmana) ಸದ್ಯದಲ್ಲೇ ಸೆಟ್ಟೇರುತ್ತಿರುವ ವಿಷ್ಯ ಗಾಂಧಿನಗರದಲ್ಲಿ ಸಖತ್ ಸದ್ದು ಮಾಡುತ್ತಿದೆ. ಕನ್ನಡದ ನಟ ರಾಕ್ಷಸ ಡಾಲಿ(Dhannanjay) ಸಿಂಧೂರ ಲಕ್ಷ್ಮಣನಾಗಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿತ್ತು. ಆದರೆ ಈಗ ನಿರ್ಮಾಪಕ ಉಮಾಪತಿ(Producer Umapathy) ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.ಇತ್ತೀಚೆಗೆ ಡಾಲಿ ನಟಿಸಿರುವ ಸಲಗ, ರತ್ನನ್ ಪ್ರಪಂಚ, ಬೈರಾಗಿ, ಪುಷ್ಪ, ಹೆಡ್‌ಬುಷ್, ಅಷ್ಟು ಚಿತ್ರಗಳು ಸಿಕ್ಕಾಪಟ್ಟೆ ಸದ್ದು ಮಾಡಿದೆ. `ಹೆಡ್‌ಬುಷ್’ ನಂತರ ಸ್ಟಾರ್ ನಿರ್ಮಾಪಕ ಉಮಾಪತಿ ನಿರ್ಮಾಣದ ಚಿತ್ರಕ್ಕೆ ಡಾಲಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಉತ್ತರ ಕರ್ನಾಟಕದ ಹೋರಾಟಗಾರ `ವೀರ ಸಿಂಧೂರ ಲಕ್ಷ್ಮಣ’ನಾಗಿ ಡಾಲಿ ಬರಲಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಈ ವಿಷ್ಯಕ್ಕೆ ಟ್ವಿಸ್ಟ್ ಸಿಕ್ಕಿದೆ. ನಿರ್ಮಾಪಕ ಉಮಾಪತಿ ಈ ಚಿತ್ರದ ಬಗ್ಗೆ ಮೌನ ಮುರಿದಿದ್ದಾರೆ. ಇದನ್ನೂ ಓದಿ:‘ಸಲಾರ್’ ಸಿನಿಮಾದಲ್ಲಿ ಕನ್ನಡದ ಯುವ ನಾಯಕ ಪ್ರಮೋದ್ ನಟಿಸಿದ್ದು ನಿಜ : ಪ್ರಶಾಂತ್ ನೀಲ್`ಸಿಂಧೂರ ಲಕ್ಷ್ಮಣ ಚಿತ್ರದ ಬಗ್ಗೆ ಸದ್ಯಕ್ಕೆ ಏನೂ ಹೇಳಲು ಸಾಧ್ಯವಿಲ್ಲ. ನನ್ನ ಮನಸ್ಸಿನಲ್ಲಿ ಇಬ್ಬರೂ ಹೀರೋ ಇದ್ದಾರೆ. ಅವರೊಂದಿಗೆ ಮಾತುಕತೆ ಆಗಿ ಅಫಿಷಿಯಲ್ ಆಗಿ ಅಡ್ವಾನ್ಸ್ ಕೊಡುವವರೆಗೂ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಎಲ್ಲವೂ ಓಕೆ ಆದ ಮೇಲೆ ನಾನು ಅಧಿಕೃತವಾಗಿ ತಿಳಿಸುತ್ತೇನೆ. ಸದ್ಯಕ್ಕೆ ನಾನು ಚುನಾವಣೆ ಕಡೆ ಗಮನ ಹರಿಸುತ್ತೇನೆ. ಫೆಬ್ರವರಿ ಸಮಯದಲ್ಲಿ ಈ ಚಿತ್ರ ಸೆಟ್ಟೇರುವ ಸಾಧ್ಯತೆಯಿದೆ. ಅಲ್ಲಿಯವರೆಗೂ ಎಲ್ಲರಿಗೂ ಸೀಕ್ರೆಟ್ ಆಗಿರುತ್ತದೆ ಎಂದು `ರಾಬರ್ಟ್’ ನಿರ್ಮಾಪಕ ಉಮಾಪತಿ ಪ್ರತಿಕ್ರಿಯೆ ನೀಡಿದ್ದಾರೆ.ಉತ್ತರ ಕರ್ನಾಟಕ ಮತ್ತು ಮುಂಬೈ ಕರ್ನಾಟಕ ಭಾಗಗಳಲ್ಲಿ ಸಿಂಧೂರ ಲಕ್ಷ್ಮಣನನ್ನು ಅಗಾಧವಾಗಿ ಗೌರವಿಸುತ್ತಾರೆ. ಸ್ವಾತಂತ್ರ್ಯಕ್ಕಾಗಿ ತಮ್ಮದೇ ಶೈಲಿಯಲ್ಲಿ ಸಿಂಧೂರ ಲಕ್ಷ್ಮಣಹೋರಾಡಿದ್ದರು. ಬಡವರ ಬಳಿಯೇ ತೆರಿಗೆ ವಸೂಲಿ ಮಾಡುತ್ತಿದ್ದ ಬ್ರಿಟಿಷರ ನಿದ್ದೆಗೆಡಿಸಿದ್ದ ಈ ಸಿಂಧೂರ ಲಕ್ಷ್ಮಣ, ಇದೀಗ ಈ ಪಾತ್ರಕ್ಕೆ ಡಾಲಿ ಜೀವತುಂಬಲಿದ್ದಾರೆ. ಈಗಾಗಲೇ ಸ್ಕ್ರೀಪ್ಟ್ ವರ್ಕ್ ಕೂಡ ನಡೆಯುತ್ತಿದೆ. ಸದ್ಯದಲ್ಲೇ ಚಿತ್ರದ ಕುರಿತು ಮತ್ತಷ್ಟು ಅಪ್‌ಡೇಟ್ ಸಿಗಲಿದೆ.
Sign in to your account
Username or Email Address


Password

 Remember Me


