ಚಿತ್ರದುರ್ಗ: ಎಲ್ಲೆಡೆ ಧರ್ಮಸಂಘರ್ಷ ತಾರಕಕ್ಕೇರಿದೆ. ಇಂತಹ ವೇಳೆ ಪ್ರೀತಿಸಿ ಮದುವೆಯಾಗಿದ್ದ ಹೆಂಡತಿ ಮತಾಂತರವಾಗಲಿಲ್ಲ ಎಂಬ ಕಾರಣಕ್ಕೆ ಗಂಡನೇ ಕೊಲೆ ಮಾಡಲು ಯತ್ನಿಸಿರುವ ಹೃದಯವಿದ್ರಾವಕ ಘಟನೆ ಚಿತ್ರದುರ್ಗದಲ್ಲಿ (Chitradurga) ಬೆಳಕಿಗೆ ಬಂದಿದೆ.ಆರೋಪಿ ಖಾದರ್ ಶಿವಮೊಗ್ಗ (Shivamogga) ಮೂಲದ ಉಮಾರನ್ನು ಮೊದಲೇ ವಿವಾಹವಾಗಿದ್ದ. ಚಿತ್ರದುರ್ಗದ (Chitradurga) ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಉಮಾ ಅವರಿಗೆ ಖಾದರ್ ಪರಿಚಯವಾಗಿದೆ. ಆ ಪರಿಚಯ ಪ್ರೀತಿಯಾಗಿ ವಿವಾಹವಾಗಿದ್ದರು. ವಿವಾಹದ ಬಳಿಕ ಆತನ ವರಸೆ ಬದಲಾಗಿದ್ದು, ಹೆಂಡತಿಯನ್ನು ಮತಾಂತರವಾಗುವಂತೆ ಒತ್ತಾಯಿಸಿದ್ದನು. ಆಗ ಈ ಒತ್ತಡಕ್ಕೊಳಗಾದ ಉಮಾಳ ಆರೋಗ್ಯ ಹದಗೆಟ್ಟಿದ್ದು, ಎರಡು ಕಾಲುಗಳು ನಿಷ್ಕ್ರಿಯಗೊಂಡಿದ್ದವು. ಈ ವೇಳೆ ತನ್ನ ಪತ್ನಿಯ ಬಗ್ಗೆ ಕಾಳಜಿವಹಿಸಬೇಕಾದ ಖಾದರ್, ಉಮಾಗೆ ಚಿತ್ರಹಿಂಸೆ ನೀಡಿ, ಆಕೆಯ ಖಾಸಗಿ ಅಂಗಾಂಗಾಗಳ ಹಲ್ಲೆ ನಡೆಸಿ, ಕ್ರೌರ್ಯ ಮೆರೆದಿದ್ದಾನೆ. ಅಲ್ಲದೇ ಇಸ್ಲಾಂ ಧರ್ಮಕ್ಕೆ ಮತಾಂತರವಾಗದಿದ್ದರೆ ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದಾನೆ. ಯಾರು ಇಲ್ಲದ ವೇಳೆ ಉಮಾಳನ್ನು ಉಸಿರುಗಟ್ಟಿಸಿ ಹತ್ಯೆ ಮಾಡಲು ಖಾದರ್ ಯತ್ನಿಸಿದ್ದಾನೆ ಎಂದು ಉಮಾ ಆರೋಪಿಸಿದ್ದಾರೆ.ಸದ್ಯ ಖಾದರ್ ಮೋಸದ ಬಲೆಗೆ ಸಿಲುಕಿಕೊಂಡಿರುವ ಉಮಾ ಕಟ್ಟುಕೊಂಡ ಗಂಡನನ್ನು ಬಿಟ್ಟು ಬಂದು, ಮತಾಂತರದ ಕೂಪಕ್ಕೆ ಸಿಲುಕಿದ್ದಾರೆ. ಅತ್ತ ಸಂಸಾರವೂ ಇಲ್ಲ, ಇತ್ತ ಆರೋಗ್ಯವು ಹದಗೆಟ್ಟಿದೆ. ಹೀಗಾಗಿ ಕಂಗಾಲಾಗಿರುವ ಉಮಾ, ಅವರ ಸಂಬಂಧಿಯಾದ ವಿಶ್ವನಾಥ್ ಮೂಲಕ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತಿದ್ದಾರೆ. ಇನ್ನೂ ತಮಗಾದ ಅನ್ಯಾಯಕ್ಕೆ ನ್ಯಾಯ ಒದಗಿಸಿಕೊಡುವಂತೆ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಭೀಮಾ ಕೋರೆಗಾಂವ್‌ ಪ್ರಕರಣ – ದಲಿತ ಚಿಂತಕ ಆನಂದ್‌ ತೇಲ್ತುಂಬ್ಡೆಗೆ ಬಾಂಬೆ ಹೈಕೋರ್ಟ್ ಜಾಮೀನುಒಟ್ಟಾರೆ ಪ್ರೀತಿಸಿ ಮದುವೆಯಾದ ಹೆಂಡತಿಯನ್ನೇ ಮತಾಂತರಗೊಳಿಸಲು ಗಂಡ ಯತ್ನಿಸಿದ್ದಾನೆ. ಹೀಗಾಗಿ ಪೊಲೀಸರೇ ಶಾಕ್ ಆಗಿದ್ದೂ, ಆರೋಪಿ ಅಬ್ದುಲ್ ಖಾದರ್‌ನನ್ನು ವಶಕ್ಕೆ ಪಡೆದು, ಪ್ರಕರಣದ ತನಿಖೆ ಮುಂದುವರೆಸಿದ್ದಾರೆ. ಇದನ್ನೂ ಓದಿ: ಇತಿಹಾಸ ನಿರ್ಮಿಸಿದ ಭಾರತ – ಮೊದಲ ಖಾಸಗಿ ನಿರ್ಮಿತ ರಾಕೆಟ್ ಉಡಾಯಿಸಿದ ಇಸ್ರೋ
Sign in to your account
Username or Email Address


Password

 Remember Me


