ಮಂಡ್ಯ: ಮುಂದೆ ನಮ್ಮದೇ ಸರ್ಕಾರ ಬರುತ್ತದೆ. ನಾನೇ ಮಳವಳ್ಳಿಯ (Malvalli) ಬಸವ ಭವನಕ್ಕೆ ಒಂದು ಕೋಟಿ ಅನುದಾನ ಕೊಡುತ್ತೇನೆ ಎನ್ನುವ ಮೂಲಕ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (H.D.KumarSwamy) ಹೇಳಿದ್ದಾರೆ.ಮಂಡ್ಯ (Mandya) ಜಿಲ್ಲೆಯ ಮಳವಳ್ಳಿಯ ಕನ್ನಹಳ್ಳಿಯ ಬಸವ ಭವನ (Basava Bhavana)ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗ ನನಗೆ ಬಸವ ಭವನಕ್ಕೆ ಅನುದಾನ ಕೊಡುವ ಅಧಿಕಾರ ಇಲ್ಲ. ಮುಂದೆ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಆಗ ನಾನೇ ಒಂದು ಕೋಟಿ ಅನುದಾನ ನೀಡುತ್ತೇನೆ ಎಂದು ಲಿಂಗಾಯತ ಸಮುದಾಯದ ಮುಖಂಡರಿಗೆ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಇಂಡಿಯಾ, ನ್ಯೂಜಿಲೆಂಡ್ ಕ್ರಿಕೆಟ್ ಸರಣಿ – ಡಿ.ಡಿ ಸ್ಪೋರ್ಟ್ಸ್‌ನಲ್ಲಿ ಮಾತ್ರ ನೇರ ಪ್ರಸಾರಅನ್ನದಾನಿ ಕ್ಷೇತ್ರದ ಸಮಸ್ಯೆಗಳಿಗೆ ಪ್ರಾಮಾಣಿಕ ಕೆಲಸ ಮಾಡುತ್ತಿದ್ದಾರೆ, ಅನ್ನದಾನಿ ಕಾರ್ಯಕ್ಕೆ ನನ್ನ ಮೆಚ್ಚುಗೆ ಇದೆ. ನಮ್ಮ ಮನೆ ಹುಡುಗ ಅಂತಾ ನಾನು ಹತ್ತಿರದಿಂದ ಆತನನ್ನು ನೋಡಿದ್ದೇನೆ. ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಸರಿಪಡಿಸಿಕೊಳ್ಳಲಿ, ನಿಮ್ಮ ಆಶೀರ್ವಾದ ಸದಾ ಪಡೆಯಲಿ. ದೇವೇಗೌಡರ ಅನುದಾನದಲ್ಲಿ 25 ಲಕ್ಷ ಬಿಡುಗಡೆಗೆ ಪತ್ರ ನೀಡುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವರನ ಕಡೆಯವರು ನೀಡಿದ ಲೆಹೆಂಗಾ ಚೀಪ್ ಕ್ವಾಲಿಟಿ – ಮದುವೆ ಬೇಡವೆಂದ ವಧು
Sign in to your account
Username or Email Address


Password

 Remember Me


